ಕೊಳ್ಳೇಗಾಲ: ತಾಲ್ಲೂಕಿನ ಯಡಕುರಿಯ ಗ್ರಾಮದ ಸೇತುವೆಯ ಬಳಿ ಭಾರಿ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ. ಸೋಮವಾರ ಸಂಜೆ ಯುವಕ ಸೇತುವೆ ಮೇಲೆ ನಿಂತು ಮೊಸಳೆ ಓಡಾಡುತ್ತಿರುವುದನ್ನು ಮೊಬೈಲ್ಫೋನ್ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಡಿಯೊ ಸಾಲಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಹಸು, ದನ, ಕುರಿ ಸೇರಿದಂತೆ ಸಾಕು ಪ್ರಾಣಿ ಹಾಗೂ ಕುಡಿಯುವ ನೀರಿಗೆ ಜನರು ಈ ನದಿಯನ್ನೇ ಆಶ್ರಯಿಸಿದ್ದಾರೆ. ಆದರೆ ಇಲ್ಲಿ ಪದೇಪದೇ ಮೊಸಳೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಸುಮಾರು 20ಕ್ಕೂ ಹೆಚ್ಚು ಮೊಸಳೆಗಳು ಇವೆ ಎಂದು ಗ್ರಾಮಸ್ಥರು ಅನೇಕ ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಸಿಬ್ಬಂದಿ ಇದುವರೆಗೂ ಬಂದು ಮೊಸಳೆಯನ್ನು ಹಿಡಿದು ಬೇರೆ ಕಡೆಗೆ ಬಿಡುವ ಪ್ರಯತ್ನವನ್ನು ಮಾಡೇ ಇಲ್ಲ. ಕಳೆದ ವರ್ಷ ಬಹಿರ್ದೆಸೆಗೆ ಹೋಗಿದ್ದ ಯುವಕನ ಮೇಲೆ ಮೊಸಳೆ ದಾಳಿ ಮಾಡಿತ್ತು. ಹೀಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೊಸಳೆಯಿಂದ ತೊಂದರೆ ಉಂಟಾದರೆ ನೇರವಾಗಿ ಅರಣ್ಯ ಇಲಾಖೆಯ ಕಾರಣರಾಗುತ್ತಾರೆ ಎಂದು ಗ್ರಾಮದ ರಂಗಸ್ವಾಮಿ, ಶಿವಸ್ವಾಮಿ, ಬಸವಣ್ಣ ಚೇತನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.