ಗುಂಡ್ಲುಪೇಟೆ: ವಿಬಿ-ಜಿ ರಾಮ್-ಜಿ ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಆಕ್ರೋಶ ಹೊರ ಹಾಕಿದರು.

ಪಟ್ಟಣದ ಸಿಎಂಎಸ್ ಕಲಾ ಮಂದಿರದಲ್ಲಿ ಬಿಜೆಪಿ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ಇವರ ವತಿಯಿಂದ ಹಮ್ಮಿಕೊಂಡಿದ್ದ ವಿಕಸಿತ ಭಾರತ ಜಿ-ರಾಮ್ ಜಿ ಗುಂಡ್ಲುಪೇಟೆ ತಾಲ್ಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಾರದರ್ಶಕತೆ, ದೂರದೃಷ್ಟಿತ್ವ ಇನ್ನೂ ಹಲವು ಸದುದ್ದೇಶಗಳ ಕಾರಣಕ್ಕೆ ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ (ವಿಬಿ-ಜಿ ರಾಮ್-ಜಿ) ಯೋಜನೆಯನ್ನು ಹಲವು ಮಾರ್ಪಾಡು ಮಾಡಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಯಡಿ 100ರ ಬದಲು 125 ದಿನಗಳ ಉದ್ಯೋಗ, ಕಾರ್ಮಿಕರ ಖಾತೆಗೆ ಹಣ ವರ್ಗಾವಣೆ ಸೇರಿ ಹೆಚ್ಚಿನ ಅನುಕೂಲ ಆಗಿದ್ದು, ಈ ಬಗ್ಗೆ ಬೊಟ್ಟು ಮಾಡಲು ಏನು ಇಲ್ಲದಿದ್ದರೂ ವಿಶೇಷ ಅಧಿವೇಶ ಕರೆದು ವಿರೋಧಿಸುತ್ತಿದೆ. ನಿಮಗೆ ಕೆಲಸ ಸಿಗುವುದಿಲ್ಲ. ಯೋಜನೆ ನಿಲ್ಲಿಸುತ್ತಾರೆ ಎಂದು ಗುಲ್ಲು ಎಬ್ಬಿಸುವ ಕಾರಣಕ್ಕೆ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಸಮಾವೇಶ ನಡೆಸಲಾಗಿದ್ದು, ಮುಂದೆ ಪಂಚಾಯಿತಿ ಮಟ್ಟದಲ್ಲೂ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರಿ ಕಟ್ಟಡ ಮತ್ತು ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನೆಹರೂ ಹೆಸರನ್ನಷ್ಟೆ ಇಟ್ಟಿದೆ. ಆದರೆ ಮೋದಿ ತಮ್ಮ ಹೆಸರಿಟ್ಟಿಲ್ಲ. ಆದರೆ ರಾಮನ ಹೆಸರು ಬಂದಿರುವುದಕ್ಕೆ ಇವರ ವಿರೋಧ ಬರುತ್ತಿದೆ. ಆದರೆ ವಾಸ್ತವದಲ್ಲಿ ಇದು ಧರ್ಮಾತೀತ, ಜಾತ್ಯತೀತವಾಗಿ ಕೇಂದ್ರ ಅನುಷ್ಠಾನ ಮಾಡಿದೆ ಎಂಬುದನ್ನೇಕೆ ಮರೆ ಮಾಚಲು ಯತ್ನಿಸುತ್ತೀರಿ ಎಂದು ಪ್ರಶ್ನಿಸಿದರು. ಈಗ ಅಬಕಾರಿ ಇಲಾಖೆಯಲ್ಲಿ ಹಗರಣ ಆಗಿದೆ. ಹಿಂದೆ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರವಾಗಿದೆ. ರೈತರಿಗೆ ಒಂದು ಬೋರ್ವೆಲ್ ಕೊಟ್ಟಿಲ್ಲ. ಅಂಬೇಡ್ಕರ್ ನಿಗಮದಿಂದ ಕಾರುಗಳನ್ನು ಕೊಟ್ಟಿಲ್ಲ. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣವನ್ನು ಸರ್ಕಾರ ಬೇರೆ ಕಡೆ ಬಳಸಿದೆ. ಓಟಿಗಾಗಿ ಮಾತ್ರ ದಲಿತರ ಬಳಕೆ ಮಾಡಿಕೊಂಡು ಅನ್ಯಾಯ ಮಾಡುತ್ತಿದೆ. ಗ್ಯಾರಂಟಿ ಯೋಜನೆಯೆಂಬ ಲಾಟರಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಮೂರು ವರ್ಷದಿಂದ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿಲ್ಲ. ಬೆಳೆ ಪರಿಹಾರ ಇನ್ನೂ ನೀಡಿಲ್ಲ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, 2047ರ ವಿಕಸಿತ ಭಾರತ ನಿರ್ಮಾಣದ ಆಶಯದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಪಾರದರ್ಶಕ ನಿರ್ವಹಣೆ, ದೂರದೃಷ್ಟಿತ್ವ, ತಂತ್ರಜ್ಞಾನ ಕಾವಲು, ಶಾಶ್ವತ ಗ್ರಾಮೀಣ ಮೂಲಸೌಕರ್ಯ (ಕುಡಿಯುವ ನೀರು, ಶಿಕ್ಷಣ, ಸ್ವಚ್ಚತೆ, ಮನೆ ನಿರ್ಮಾಣ) ಸ್ವಾವಲಂಬನೆ ಸಲುವಾಗಿ ಜಾರಿ ಮಾಡುತ್ತಿದೆ. ಇದರಿಂದ ಗ್ರಾಮೀಣ ಜನರ ಭರವಸೆ ಬದುಕಿಗೆ ಖಚಿತತೆ ಸಿಗಲಿದೆ. ಜೀವನೋಪಾಯದ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಲಾಗುತ್ತದೆ. ಹೀಗಾಗಿ ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಎನ್.ಮಲ್ಲೇಶ್, ಅರಕಲವಾಡಿ ನಾಗೇಂದ್ರ, ಎಲ್.ಸುರೇಶ್, ಕುಲಗಾಣ ಶಾಂತಮೂರ್ತಿ, ಡಾ.ನವೀನ್ ಮೌರ್ಯ, ಮಹದೇವಶೆಟ್ಟಿ, ಬಸವರಾಜು, ಕೆ.ಆರ್.ಲೋಕೇಶ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ, ಸುನೀಲ್ ಮೂಡ್ಲು, ಗರಗನಹಳ್ಳಿ ಮಹೇಂದ್ರ, ಪ್ರಣಯ್, ನಮೋ ಮಂಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.