ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಸ್ತೂರು ಬಂಡಿ ಜಾತ್ರೆಗೂ ಅಡ್ಡಿಯಾದ ಕೋವಿಡ್‌

Last Updated 15 ಜನವರಿ 2021, 15:45 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕಸ್ತೂರು ಗ್ರಾಮಸ ದೊಡ್ಡಮ್ಮ ಬಂಡಿ ಜಾತ್ರೋತ್ಸವಕ್ಕೂ ಈ ಬಾರಿ ಕೋವಿಡ್‌ ಕರಿನೆರಳು ಬಿದ್ದಿದೆ.

ಇದೇ 24 ರಂದು ನಡೆಯುವ ಜಾತ್ರೆಯ ದಿನ ದೊಡ್ಡಮ್ಮತಾಯಿ ಹಾಗೂ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಸಾರ್ವಜನಿಕ ಹಾಗೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

ಕೋವಿಡ್ ಕಾರಣದಿಂದ ಈ ವರ್ಷದ ಮಟ್ಟಿಗೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಊರಿನ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಆಯಾ ಊರುಗಳಲ್ಲಿ ಬಂಡಿ ಕಟ್ಟಿ ಆಚರಣೆ ಮಾಡಿ. ಆದರೆ, ಬಂಡಿ ಮೆರವಣಿಗೆ ನಡೆಸಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು, ‘ಗ್ರಾಮಗಳ ಯಜಮಾನರು ಹಾಗೂ ಮುಖಂಡರು ನನ್ನನ್ನು ಭೇಟಿಯಾಗಿ ಮಾತನಾಡಿದ್ದಾರೆ. ಪ್ರತಿ ವರ್ಷ ಜಾತ್ರೆಗೆ 50 ಸಾವಿರದಷ್ಟು ಜನರು ಸೇರುತ್ತಾರೆ ಎಂದು ತಿಳಿಸಿದ್ದಾರೆ. ಕೋವಿಡ್‌ ಇರುವುದರಿಂದ ಅಷ್ಟು ಜನರು ಸೇರುವುದು ಸರಿಯಲ್ಲ. ಹಾಗಾಗಿ, ಅದ್ಧೂರಿಯಾಗಿ ಜಾತ್ರೆ ನಡೆಸದಂತೆ ತಿಳಿಸಲಾಗಿದೆ’ ಎಂದರು.

‘ಆಯಾ ಊರುಗಳಲ್ಲಿ ಜನರು ಬಂಡಿ ಕಟ್ಟಿ ಪೂಜೆ ಪುನಸ್ಕಾರ ನಡೆಸುವುದಕ್ಕೆ ತೊಂದರೆ ಇಲ್ಲ. ಆದರೆ, ಬಂಡಿಗಳ ಮೆರವಣಿಗೆ ಮಾಡಿ ಕಸ್ತೂರು ದೇವಾಲಯಕ್ಕೆ ತರುವುದು ಬೇಡ. ಅಲ್ಲಿ ಎಲ್ಲ ಊರಿನ ಮುಖಂಡರು ಕನಿಷ್ಠ ಸಂಖ್ಯೆಯಲ್ಲಿ ಸೇರಿ ಸಾಂಪ್ರದಾಯಿಕ ಹಾಗೂ ಸರಳವಾಗಿ ಪೂಜೆ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಲ್ಲೂಕಿನ ದೊಡ್ಡಮ್ಮ ತಾಯಿ ಬಂಡಿ ಜಾತ್ರೋತ್ಸವ 16 ಗ್ರಾಮಗಳ 23 ಹಳ್ಳಿಗಳು ಭಾಗಿಯಾಗುವ ಉತ್ಸವ. ಪ್ರತಿವರ್ಷ ಈ ಗ್ರಾಮಗಳ ಜನರು ಅದ್ಧೂರಿಯಾಗಿ ಜಾತ್ರೆಯನ್ನು ಮಾಡುತ್ತಾರೆ. 23 ಹಳ್ಳಿಗಳಲ್ಲಿ ಬಂಡಿಗಳನ್ನು ಅಲಂಕರಿಸಿ ಕಸ್ತೂರಿನ ದೊಡ್ಡಮ್ಮ ತಾಯಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸುತ್ತಾರೆ. ಜಾತ್ರೆಯ ದಿನ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಸೇರಿ ದೊಡ್ಡಮ್ಮ ತಾಯಿ ಹಾಗೂ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ.

ದೂರದ ಊರುಗಳಲ್ಲಿರುವ ಈ ಗ್ರಾಮದ ಜನರು ಈ ಜಾತ್ರೆಯ ಸಮಯದಲ್ಲಿ ತಮ್ಮ ಊರುಗಳಿಗೆ ಬಂದು ಕುಟುಂಬದವರೊಂದಿಗೆ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.

ಚಿಕ್ಕಲ್ಲೂರಿಗೆ ನಿರ್ಬಂಧ: ಇದೇ 28ರಿಂದ ಫೆ.1ರವರೆಗೆ ನಡೆಯಲಿರುವ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರಾ ಸಮಯದಲ್ಲಿ ದೇವಾಲಯ ಹಾಗೂ ಮಠಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT