ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್

Published : 25 ಸೆಪ್ಟೆಂಬರ್ 2024, 15:47 IST
Last Updated : 25 ಸೆಪ್ಟೆಂಬರ್ 2024, 15:47 IST
ಫಾಲೋ ಮಾಡಿ
Comments

ಚಾಮರಾಜನಗರ: ದೇಶದ ಸುಂದರ ವಾಸ್ತುಶಿಲ್ಪಗಳ ಕಲಾ ಸೌಂದರ್ಯಕ್ಕೆ ಶಿಲ್ಪಿಗಳು ಆರಾಧಿಸುವ ವಿಶ್ವಕರ್ಮರು ಕಾರಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಟಿಕರ್ತ ಎಂದರ್ಥ. ಭಗವಾನ್ ಶ್ರೀಕೃಷ್ಣನ ದ್ವಾರಕೆ, ಪಾಂಡವರ ಇಂದ್ರಪ್ರಸ್ಥ ಸೇರಿದಂತೆ ವಿಶ್ವಪ್ರಸಿದ್ಧ ದೇವಾಲಯಗಳಲ್ಲಿರುವ ವಾಸ್ತುಶಿಲ್ಪಗಳನ್ನು ವಿಶ್ವಕರ್ಮರು ನಿರ್ಮಿಸಿದ್ದು ಪ್ರಪಂಚದ ಮೊಟ್ಟಮೊದಲ ವಾಸ್ತುಶಿಲ್ಪಕಾರರಾಗಿದ್ದಾರೆ ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ ವಿಶ್ವಕರ್ಮರು ವಿಶ್ವದ ಶ್ರೇಷ್ಠ ವಾಸ್ತುಶಿಲ್ಪಿಗಳಾಗಿದ್ದು, ರೈತರ ನೇಗಿಲಿನಿಂದ ಹಿಡಿದು ಅರಮನೆಗಳ ನಿರ್ಮಾಣದವರೆಗೂ ವಿಶ್ವಕರ್ಮರ ಕೊಡುಗೆ ಸಾಕಷ್ಟಿದೆ. ಜಗತ್ತಿನೆಲ್ಲೆಡೆ ದೇವಾಲಯ, ಪ್ರಾರ್ಥನಾ ಮಂದಿರಗಳನ್ನು ವಿಶ್ವಕರ್ಮ ನಿರ್ಮಿಸಿದ್ದಾರೆ ಎಂದರು.

ನಗರಸಭಾ ಉಪಾಧ್ಯಕ್ಷೆ ಎಚ್.ಎಸ್.ಮಮತಾ ಮಾತನಾಡಿ ‘ಸಂಸ್ಕ್ರತದಲ್ಲಿ ವಿಶ್ವಕರ್ಮ ಎಂದರೆ ಎಲ್ಲವ‌‌ನ್ನೂ ಸಾಧಿಸಿದವರು ಎಂದರ್ಥ. ವಿಶ್ವಕರ್ಮ ಪ್ರಪಂಚದ ಮೊದಲ ಎಂಜಿನಿಯರ್ ಕೂಡ ಆಗಿದ್ದಾರೆ ಎಂದರು.

ಬರಹಗಾರ ಸತೀಶ್ ಮುಳ್ಳೂರು ಮಾತನಾಡಿ ವಿಶ್ವಕರ್ಮರು ಪ್ರಕೃತಿಯ ಎಲ್ಲಾ ಪ್ರಾಣಿಸಂಕುಲದಲ್ಲಿಯೂ ಜೀವಂತವಾಗಿದ್ದಾರೆ. ಹಳ್ಳಿಗಳಲ್ಲಿ ದೇವಾಲಯಗಳ ಪರಿಕಲ್ಪನೆ ನೀಡಿದವರು ವಿಶ್ವಕರ್ಮರಾಗಿದ್ದಾರೆ. ಹಳ್ಳಿಗಳು ಸಾಂಸ್ಕ್ರತಿಕವಾಗಿ ಬೆಳೆಯಲು ವಿಶ್ವಕರ್ಮರೇ ಕಾರಣರು ಎಂದು ಸ್ಮರಿಸಿದರು.

ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‍ಕುಮಾರ್, ಡಿವೈಎಸ್‌ಪಿ ಲಕ್ಷ್ಮಯ್ಯ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಅನಂತಕುಮಾರ್, ಮುಖಂಡರಾದ ಕುಮಾರ್, ಲಿಂಗಣ್ಣಚಾರ್ಯ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಸಾಂಸ್ಕ್ರತಿಕ ಕಲಾತಂಡಗಳೊಂದಿಗೆ ಅಲಂಕೃತ ಬೆಳ್ಳಿರಥದಲ್ಲಿ ವಿಶ್ವಕರ್ಮೀ ಭಾವಚಿತ್ರದ ಮೆರೆವಣಿಗೆ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಜಿಲ್ಲಾಡಳಿತ ಭವನದ ಬಳಿ ಸಮಾಪನಗೊಂಡಿತು.

ಚಾಮರಾಜನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಚಾಮರಾಜನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT