ಶೀಘ್ರ ದುರಸ್ತಿಗೊಳಿಸಿ ನೀರು ಪೂರೈಕೆ ಚಾಮರಾಜನಗರದಲ್ಲಿ ನಗರಸಭೆಯಿಂದ ನಿರ್ವಹಣೆ ಮಾಡುತ್ತಿರುವ 16 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಎರಡು ಘಟಕಗಳು ಸ್ಥಗಿತವಾಗಿವೆ. ಶೀಘ್ರ ದುರಸ್ತಿಗೊಳಿಸಿ ನೀರು ಪೂರೈಕೆ ಮಾಡಲಾಗುವುದು.ಪ್ರಕಾಶ್ ನಗರಸಭೆ ಎಂಜಿನಿಯರ್
‘ಹನೂರಿನಲ್ಲಿ ಸಮಸ್ಯೆ ಗಂಭೀರ’ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಬೇಕು ಎಂಬ ದೃಷ್ಟಿಯಿಂದ ಆರಂಭಿಸಿರುವ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಜನರಿಗೆ ತೊಂದರೆಯಾಗಿದೆ. ಗಂಭೀರ ಕುಡಿಯುವ ನೀರಿನ ಸಮಸ್ಯೆ ಇರುವ ಹನೂರು ತಾಲ್ಲೂಕಿನಲ್ಲಿರುವ ಘಟಕಗಳನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು.ಮುರುಡೇಶ್ವರ ಸ್ವಾಮಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜೀಪುರ
‘ದುರಸ್ತಿಗೆ ಸೂಚನೆ’ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಟ್ಟುನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರ ಘಟಕಗಳು ಕಾರ್ಯನಿರ್ವಹಿಸಲಿದ್ದು ಜನರಿಗೆ ಶುದ್ಧ ಕುಡಿಯುವ ನೀರು ದೊರಯೆಲಿದೆ.ಉಮೇಶ್ ಹನೂರು ತಾಲ್ಲೂಕು ಪಂಚಾಯಿತಿ ಇಒ
ದುರಸ್ತಿಗೆ ಒತ್ತು ನೀಡಿ ಯಳಂದೂರು ತಾಲ್ಲೂಕಿನ ಶೇ50ರಷ್ಟು ಭಾಗಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳು ನೀರು ಪೂರೈಸುತ್ತವೆ. ಘಟಕಗಳು ಕೆಟ್ಟುನಿಂತಾಗ ಕೂಡಲೇ ದುರಸ್ತಿಗೊಳಿಸಿದರೆ ಸಮಸ್ಯೆ ಬಗೆಹರಿಯಲಿದೆ. ನಿರ್ವಹಣೆ ಹೊಣೆ ಹೊತ್ತಿರುವ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.ಶಿವರಾಮು ಕಟ್ಟೆ ಗಣಿಗನೂರು
ಯಳಂದೂರು ಸಮಸ್ಯೆ ನಿವಾರಣೆ ಮುಖ್ಯಾಧಿಕಾರಿ ಯಳಂದೂರು ಪಟ್ಟಣದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಕೆಲವು ಘಟಕಗಳಲ್ಲಿ ಸಮಸ್ಯೆ ಕಂಡು ಬಂದಿದ್ದು ದುರಸ್ತಿಗೆ ಒತ್ತು ನೀಡಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.ಎಂ.ಪಿ.ಮಹೇಶ್ ಕುಮಾರ್ ಪ.ಪಂ ಮುಖ್ಯಾಧಿಕಾರಿ ಯಳಂದೂರು
ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 21 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು 9 ಘಟಕಗಳು ದುರಸ್ತಿಯಲ್ಲಿವೆ. ಕೆಟ್ಟಿರುವ ಘಟಕಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದ್ದು ಸರಿಪಡಿಸಲು ಸೂಚಿಸಲಾಗಿದೆ.ಲಕ್ಷ್ಮಿ ನಗರಸಭೆ ಎಂಜಿನಿಯರ್
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಮುಡಿಗುಂಡ ಬಡಾವಣೆಯಲ್ಲಿ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ದುರಸ್ತಿ ಮಾಡಿಸಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಜಗದೀಶ್ ಕೊಳ್ಳೇಗಾಲ ನಿವಾಸಿ
‘ತುರ್ತಾಗಿ ರಿಪೇರಿ ಮಾಡಿಸಿ’ ಜಲ ಜೀವನ್ ಮಿಷನ್ ಯೋಜನೆಯಡಿ ಪೂರೈಕೆಯಾಗುತ್ತಿರುವ ಹಾಗೂ ತೊಂಬೆಗಳಲ್ಲಿ ಬರುವ ಕುಡಿಯುವ ನೀರು ಶುದ್ಧವಾಗಿಲ್ಲ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ನೀರು ನೀಡಬೇಕು ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತುರ್ತು ರಿಪೇರಿ ಮಾಡಿಸಬೇಕು.ಪುಟ್ಟಣ್ಣ ಸಂತೇಮರಹಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.