ಚಾಮರಾಜನಗರ: ಸುರಕ್ಷಿತ ಸಂಚಾರ ನಿಯಮಗಳನ್ನು ಅರಿತು ವಾಹನ ಚಾಲನೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ದಿನೇಶ್ ಕುಮಾರ್ ಸಲಹೆ ನೀಡಿದರು.

ನಗರದ ಮಲ್ಲಯ್ಯನಪುರದ ಬಳಿಯ ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಪರೀಕ್ಷೆಗೊಳಪಡಿಸಿ, ಸಂಚಾರ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರಿ ನಿಯಮಗಳ ಪಾಲನೆಯಿಂದ ಅಪಘಾತಗಳನ್ನು ತಪ್ಪಿಸಬಹುದು. ವೈಯಕ್ತಿಕ ಸುರಕ್ಷತೆಗೆ ಜೊತೆಗೆ ಇತರರ ಸುರಕ್ಷತೆಯೂ ಸಾಧ್ಯ ಎಂದರು.

ಹೊಸದಾಗಿ ಚಾಲನಾ ಪರವಾನಗಿ ಪಡೆಯುವವರು ನಿಯಮಗಳನ್ನು ಪಾಲಿಸಬೇಕು, ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ರಸ್ತೆ ಬದಿ ಅಳವಡಿಸಿರುವ ಸಂಚಾರ ಫಲಕಗಳನ್ನು ಗಮನಿಸಿ ಪಾಲಿಸಬೇಕು ಎಂದರು.

ವಾಹನಗಳಿಗೆ ಕಡ್ಡಾಯ ವಿಮೆ ಮಾಡಿಸಿರಬೇಕು, ರಸ್ತೆ ದಾಟುವಾಗ ಸಿಗ್ನಲ್ ಗಮನಿಸಿ ಅನುಸರಿಸಬೇಕು. ವಾಹನಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು ಸರಿಯಾಗಿವೆಯೇ ಎಂದು ಖಾತ್ರಿಪಡಿಸಿಕೊಂಡು ರಸ್ತೆಗೆ ಇಳಿಸಬೇಕು ಎಂದು ದಿನೇಶ್ ತಿಳಿವಳಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.