ಭಾನುವಾರ, ಜನವರಿ 17, 2021
26 °C

ಚಾಮರಾಜನಗರ: ಎಂಟು ಪ್ರಕರಣಗಳು, ಐದು ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ ಎಂಟು ಹೊಸ ಪ್ರಕರಣಗಳು ದೃಢಪಟ್ಟಿವೆ. ಐದು ಮಂದಿ ಗುಣಮುಖರಾಗಿದ್ದಾರೆ. 

ಸೋಮವಾರ ಒಂದು ಪ್ರಕರಣವೂ ವರದಿಯಾಗಿರಲಿಲ್ಲ. ಆದರೆ, ಸೋಮವಾರ 398 ಕೋವಿಡ್‌ ಪರೀಕ್ಷೆಗಳ ವರದಿಗಳು ಮಾತ್ರ ಬಂದಿದ್ದವು. ಮಂಗಳವಾರ 1,322 ಪರೀಕ್ಷಾ ವರದಿಗಳು ಬಂದಿದ್ದು, ಐವರಿಗೆ ಸೋಂಕು ಇರುವುದು ದೃಢಪಟ್ಟಿವೆ. ಎರಡು ಪ್ರಕರಣ ಮೈಸೂರಿನಲ್ಲಿ ಮತ್ತು ಒಂದು ಪ್ರಕರಣ ಮಂಡ್ಯದಲ್ಲಿ ದೃಢಪಟ್ಟಿದೆ.

ಮಂಗಳವಾರ ಸೋಂಕಿನ ಪ್ರಕರಣಗಳು ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 42ಕ್ಕೆ ಏರಿದೆ. ಈ ಪೈಕಿ 25 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ ಯಾರೂ ಇಲ್ಲ. 

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 6,836ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 6,663ಕ್ಕೆ ತಲುಪಿದೆ. ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸವಾಗಿಲ್ಲ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು