ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ವಿದ್ಯುತ್‌ ಆಘಾತ ಹೆಣ್ಣಾನೆ ಸಾವು

Last Updated 1 ಫೆಬ್ರುವರಿ 2023, 6:08 IST
ಅಕ್ಷರ ಗಾತ್ರ

ಹನೂರು: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಬೈಲೂರು ವನ್ಯಜೀವಿ ವಲಯದಲ್ಲಿ ಹೆಣ್ಣಾನೆಯೊಂದು ವಿದ್ಯುತ್ ಆಘಾತದಿಂದ ಮೃತಪಟ್ಟಿರುವುದು ಮಂಗಳವಾರ ಗೊತ್ತಾಗಿದೆ.

ಬೈಲೂರು ವ್ಯನ್ಯಜೀವಿ ವಲಯದ ಗುಂಡಿಮಾಳದಲ್ಲಿರುವ ಪ್ರಭಾಕರ್ ಎಂಬುವವರು ತಮ್ಮ ಜಮೀನಿಗೆ ವಿದ್ಯುತ್ ತಂತಿಯನ್ನು ಬಿಟ್ಟಿದ್ದರು. ಸೋಮವಾರ ರಾತ್ರಿ ಕಾಡಾನೆಗಳ ಹಿಂಡು ಜೋಳ ಬೆಳೆದಿದ್ದ ಜಮೀನಿಗೆ ನುಗ್ಗಲು ಯತ್ನಿಸಿವೆ. ಈ ಸಂದರ್ಭದಲ್ಲಿ ಹೆಣ್ಣಾನೆ ವಿದ್ಯುತ್ ಆಘಾತ ಸ್ಥಳದಲ್ಲೇ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿ, ಪರಿಶೀಲಿಸಿದರು.

ಜಮೀನು ಮಾಲೀಕ ಪ್ರಭಾಕರ್ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ರಕ್ಷಿತಾರಣದ ಅಂಚಿನಲ್ಲಿ ವಿದ್ಯುತ್ ಕಂಬಗಳು ಬಾಗಿದ್ದು, ತಂತಿಗಳು ಜೋತು ಬಿದ್ದಿವೆ. ರಾತ್ರಿ ವೇಳೆ ಅರಣ್ಯದಂಚಿನ ಜಮೀನಿನಲ್ಲಿರುವ ರೈತರು ತಮ್ಮ ಜಮೀನಿನ ಸುತ್ತಲೂ ವಿದ್ಯುತ್ ತಂತಿ ಬಿಡುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳು, ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಸೆಸ್ಕ್‌ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT