ಯಳಂದೂರು: ಕೃಷಿಕರಿಗೆ ವರಮಾನ ಹೆಚ್ಚಿಸಲು ಅನುಕೂಲವಾಗುವಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿ ಪಂಚಾಯಿತಿ ಕೇಂದ್ರಗಳಲ್ಲಿ ರೈತರನ್ನು ಕೇಂದ್ರವಾಗಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ ಹೇಳಿದರು.

ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿಯ ಜೊತೆ ಪಶು ಸಂಗೋಪನೆ, ರೇಷ್ಮೆ ಉತ್ಪಾದನೆ, ನೈಸರ್ಗಿಕ ಕೃಷಿ, ತೋಟಗಾರಿಕೆ ಬೆಳೆಗಳ ಸಾಂಗತ್ಯವೂ ಸೇರಿದೆ. ಪ್ರತಿ ಕೃಷಿಕರನ್ನು ಮಿನಿ ವಿಜ್ಞಾನಿಗಳಾಗಿ ರೂಪಿಸುವ ದೆಸೆಯಲ್ಲಿ ಇವರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗುತ್ತದೆ. ಕೃಷಿಕರು ಒಂದೇ ಬೆಳೆಗೆ ಕಟ್ಟುಬೀಳದೆ ಪ್ರತಿ ದಿನ ಆದಾಯ ವೃದ್ಧಿಸುವ ಮಿಶ್ರ ಬೆಳೆಗಳನ್ನು ಬೆಳೆಸಿಕೊಳ್ಳಬೇಕು. ಇವುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು’ ಹೊಂದಬೇಕು ಎಂದರು.

‘ವರ್ಷಪೂರ್ತಿ ಬೆಳೆಯುವ ಹಣ್ಣಿನ ಬೆಳೆ, ತೆಂಗು, ಕಂಗು, ಕೋಳಿ, ಮೀನು ಸಾಕಣೆ ಈಚಿನ ದಿನಗಳಲ್ಲಿ ಮುಂಚೂಣಿಗೆ ಬರುತ್ತಿರುವ ಸಮಗ್ರ ಬೆಳೆ ಪದ್ಧತಿಗಳಾಗಿವೆ. ಸಾವಯವ ಪದ್ಧತಿಯಲ್ಲಿ ಬೆಳೆದ ಕಾಯಿಪಲ್ಯಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಸ್ಥಳೀಯ ಇಲ್ಲವೇ ಪಟ್ಟಣ ಪ್ರದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡು ಹೆಚ್ಚು ಸಂಪಾದಿಸುವ ಗುರಿ ಹೊಂದಬೇಕು’ ಎಂದು ತಿಳಿಸಿದರು.

ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ, ರಾಷ್ಟ್ರೀಯ ಪಶು ಪೋಷಣಾ ಸಂಸ್ಥೆ ವಿಜ್ಞಾನಿಗಳಾದ ಡಾ.ಗಿರಿಧರ್, ಡಾ.ಆನಂದ್, ಕೆವಿಕೆ ವಿಜ್ಞಾನಿ ಡಾ. ಶೃತಿ, ಡಾ.ಚಂದ್ರಶೇಖರ್ ಕಲ್ಲಿಮಣಿ, ತೋಟಗಾರಿಕೆ ಇಲಾಖೆಯ ವೀಣಾ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್, ಮಹೇಶ್, ಪಿಡಿಒ ಮಹದೇವಸ್ವಾಮಿ, ರೈತರಾದ ನಾಗರಾಜಪ್ಪ, ಶಾಂತಪ್ಪ, ಮಹೇಶ್, ಪ್ರಕಾಶ್, ನಾಗರಾಜು, ಮಹೇಶ್, ಆನಂದ್ ಇದ್ದರು

ರೈತರು ವಿಜ್ಞಾನಿಗಳ ನಡುವೆ ಮಾತಿನ ಚಕಮಕಿ

‘ಇಲಾಖೆಗಳು ಕಾರ್ಯಕ್ರಮ ಮಾಡಿ ಕೈತೊಳೆದುಕೊಳ್ಳುತ್ತವೆ ನಂತರ ರೈತರ ಹತ್ತಿರ ಸುಳಿಯುವುದಿಲ್ಲ. ಕಳಪೆ ಬಿತ್ತನೆ ಬೀಜ ನೀಡಿ ವಂಚಿಸಲಾಗಿದೆ. ಬಿತ್ತಿದ ಕಾಳು ಪೈರು ಕಟ್ಟದೆ ರೈತರು ನಷ್ಟ ಹೊಂದುತ್ತಾರೆ. ಮಳೆಗಾಲಕ್ಕೂ ಮೊದಲೇ ಬೀಜ ವಿತರಿಸುತ್ತಿಲ್ಲ. ಬೆಳೆ ನಷ್ಟದ ಸಂದರ್ಭದಲ್ಲಿ ತಿರುಗಿಯೂ ನೋಡುವುದಿಲ್ಲ. ವಿಜ್ಞಾನಿಗಳು ಬೆಳೆ ಪ್ರಯೋಗದ ವರದಿಗಳನ್ನು ಎರಡು ವರ್ಷಗಳ ನಂತರ ರೈತರಿಗೆ ದಾಟಿಸುವುದನ್ನು ಬಿಟ್ಟರೆ ಹೊಲದ ಕಡೆ ಇವರು ಸುಳಿಯುವುದಿಲ್ಲ. ಕಾಟಾಚಾರದ ಇಂತಹ ಕಾರ್ಯಕ್ರಮಗಳಿಂದ ಪ್ರಯೋಜನ ಇಲ್ಲ’ ಎಂದು ಕೃಷಿಕರಾದ ಪ್ರಕಾಶ್ ಮತ್ತು ನಾಗರಾಜು ದೂರಿದರು. ಈ ವೇಳೆ ರೈತರು ಮತ್ತು ಕೃಷಿ ವಿಜ್ಞಾನಿಗಳ ಜೊತೆ ಮಾತಿನ ಚಕಮಕಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.