ಮಂಗಳವಾರ, ನವೆಂಬರ್ 30, 2021
21 °C

ಚಾಮರಾಜನಗರದಲ್ಲಿ 51 ಹೊಸ ಪ್ರಕರಣ, 38 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 51 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. 38 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ. 

ಜಿಲ್ಲೆಯಲ್ಲಿ ಇದುವರೆಗೆ 2,581 ಪ್ರಕರಣಗಳು ವರದಿಯಾಗಿವೆ. 2021 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ 510 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೊಲೇಷನ್‌ನಲ್ಲಿ 139 ಮಂದಿ ಇದ್ದಾರೆ. 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ ಕೋವಿಡ್‌ನಿಂದ 32 ಜನರು ಮೃತಪ‍ಟ್ಟಿದ್ದರೆ, ಅನ್ಯ ಕಾರಣಗಳಿಂದ 18 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಶುಕ್ರವಾರ 857 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳ‍ಪಡಿಸಲಾಗಿದೆ. ಆರ್‌ಟಿಪಿಸಿಆರ್‌ ವಿಧಾನದಲ್ಲಿ 322, ರ‍್ಯಾಪಿಡ್‌ ಆ್ಯಂಟಿಜೆನ್‌ ಮೂಲಕ 520 ಹಾಗೂ ಟ್ರು ನಾಟ್‌ ವಿಧಾನದಲ್ಲಿ 15 ಮಂದಿಯ ಪರೀಕ್ಷೆ ನಡೆಸಲಾಗಿದೆ. 806 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಇದುವರೆಗೆ 43,325 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದು, 40,755 ವರದಿಗಳು ನೆಗೆಟಿವ್‌ ಬಂದಿದೆ. 

ಶುಕ್ರವಾರ ಸೋಂಕಿಗೆ ತುತ್ತಾಗಿರುವ 51 ಮಂದಿಯಲ್ಲಿ ಕೊಳ್ಳೇಗಾಲ ತಾಲ್ಲೂಕಿನ 19, ಚಾಮರಾಜನಗರ ತಾಲ್ಲೂಕಿನ 13, ಗುಂಡ್ಲುಪೇಟೆಯ ಒಂಬತ್ತು, ಹನೂರಿನ ಆರು, ಯಳಂದೂರು ತಾಲ್ಲೂಕಿನ ಒಬ್ಬರು ಹಾಗೂ ಹೊರ ಜಿಲ್ಲೆಯ ಮೂವರು ಇದ್ದಾರೆ. 

ಸೋಂಕು ಮುಕ್ತರಾದವರ ಪೈಕಿ ಕೊಳ್ಳೇಗಾಲ ತಾಲ್ಲೂಕಿನ 13, ಚಾಮರಾಜನಗರದ 11, ಯಳಂದೂರಿನ ಆರು, ಹನೂರಿನ ನಾಲ್ವರು ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಇಬ್ಬರು ಇದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು