ಹನೂರು (ಚಾಮರಾಜನಗರ): ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿ ಕಪ್ಪು ಚಿರತೆ ಕಾಣಿಸಿಕೊಂಡಿದೆ.

ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಈ ಚಿರತೆಯ ಚಿತ್ರ ಸೆರೆಯಾಗಿದೆ. ಸಮೀಪದ ಬಂಡೀಪುರ ಹಾಗೂ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಹಿಂದೆ ಕಪ್ಪು ಚಿರತೆ ಕಾಣಿಸಿಕೊಂಡಿತ್ತು.

1987ರಲ್ಲಿ ವನ್ಯಧಾಮವಾಗಿ ಘೋಷಣೆಯಾಗಿದ್ದ ಬಿಆರ್‌ಟಿ ಅರಣ್ಯ, 2011ರಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಯಿತು. ಮಲೆಮಹದೇಶ್ವರ ವನ್ಯಧಾಮ, ಸತ್ಯಮಂಗಲ ಹುಲಿ ರಕ್ಷಿತಾರಣ್ಯದೊಂದಿಗೆ ಗಡಿ ಹಂಚಿಕೊಂಡಿರುವ ಈ ಪ್ರದೇಶ ಹುಲಿ, ಚಿರತೆ, ಕೆನ್ನಾಯಿ, ಜೇನುಹಿರ್ಕ ಸೇರಿದಂತೆ ಹಲವು ಮಾಂಸಾಹಾರಿಗಳು ಹಾಗೂ ಸಸ್ಯಾಹಾರಿ ಪ್ರಾಣಿಗಳಿಗೆ ಆಶ್ರಯ ನೀಡಿದೆ. ಇದೀಗ ಕಪ್ಪು ಚಿರತೆ ಈ ಸಾಲಿಗೆ ಸೇರಿಕೊಳ್ಳಲಿದೆ.

ಕಾರಿಡಾರ್ ಬಳಕೆ: ಯಡೆಯಾರಳ್ಳಿ ಕಾರಿಡಾರ್‌ಗೆ ಕೆಲವು ಮೀಟರ್ ಅಂತರದಲ್ಲಿ ಅಳಡಿಸಿರುವ ಕ್ಯಾಮೆರಾದಲ್ಲಿ ಚಿತ್ರ ಸೆರೆಯಾಗಿದೆ. ಹೀಗಾಗಿ, ಚಿರತೆಯು ಈ ಕಾರಿಡಾರ್ ಮೂಲಕ ಓಡಾಡುತ್ತಿರಬಹುದು. ಸಮೀಪದಲ್ಲೇ ಇರುವ ಮಲೆಮಹದೇಶ್ವರ ವನ್ಯಧಾಮದಲ್ಲೂ ಸಂಚರಿಸಿರಬಹುದು ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

‘ಕಪ್ಪು ಚಿರತೆಗಳುಬೇರೆಉಪಪ್ರಭೇದವಲ್ಲ,ಮೆಲನಿನ್ಎಂಬ ವಂಶವಾಹಿಯಿಂದಾಗಿ ಬಣ್ಣದವರ್ಣಾಂಕಿತ ಹೆಚ್ಚಿರುವುದರಿಂದ ಕೆಲ ಚಿರತೆಗಳುಈಬಣ್ಣ ಹೊಂದಿರುತ್ತವೆ.ಕರ್ನಾಟಕದಲ್ಲಿ ಕಪ್ಪುಚಿರತೆಗಳುಅಣಶಿ-ದಾಂಡೇಲಿ, ನಾಗರಹೊಳೆ, ಬಂಡೀಪುರ,ಭದ್ರಾ ಹುಲಿಸಂರಕ್ಷಿತಪ್ರದೇಶಗಳಲ್ಲಿಮತ್ತುನುಗುವನ್ಯಜೀವಿಧಾಮದಲ್ಲಿಕಂಡುಬಂದಿವೆ. ತಮಿಳುನಾಡು,ಗೋವಾ,ಮಹಾರಾಷ್ಟ್ರ, ಅಸ್ಸಾಂ,ಒಡಿಶಾ,ಮಧ್ಯಪ್ರದೇಶ ರಾಜ್ಯಗಳಲ್ಲೂ ಕಂಡು ಬಂದಿವೆ. ಈಗ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲೂ ಕಂಡುಬಂದಿರುವುದುಸಂತೋಷದವಿಷಯ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಿಳಿಸಿದರು.

ಬಿಆರ್‌ಟಿ ಅರಣ್ಯದಲ್ಲಿ ಕಪ್ಪು ಚಿರತೆ ಇರುವುದು ದೃಢಪಟ್ಟಿದೆ. ಇದು ಮಾಂಸಾಹಾರಿ ಪ್ರಾಣಿಗಳ ಸಂತತಿ ಹೆಚ್ಚಿಗೆಯಾಗಿರುವ ಸೂಚನೆ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ಸಂತೋಷ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.