ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿವಿಯ 104ನೇ ಘಟಿಕೋತ್ಸವ: ಜೆಸ್‌ಎಸ್‌ ಕಾಲೇಜಿನ ಮೂವರಿಗೆ ಚಿನ್ನದ ಪದಕ

Published 2 ಮಾರ್ಚ್ 2024, 14:18 IST
Last Updated 2 ಮಾರ್ಚ್ 2024, 14:18 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ವಿವಿಯ 104ನೇ ಘಟಿಕೋತ್ಸವದಲ್ಲಿ ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿದ್ದಾರೆ. 

ಸ್ಫೂರ್ತಿ
ಸ್ಫೂರ್ತಿ

ವಿಜ್ಞಾನ ವಿಭಾಗದ (ಬಿಎಸ್‌ಸಿ) ರಸಾಯನಶಾಸ್ತ್ರ ವಿಷಯದಲ್ಲಿ ನಿಸರ್ಗ ವಿ. ಮೂರು ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನ ಹಾಗೂ ಪ್ರಾಣಿ ವಿಜ್ಞಾನ ವಿಷಯದಲ್ಲಿ ಸ್ಪೂರ್ತಿ ಪಿ.ಎಸ್ ಒಂದು ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸುಚಿತ್ರ ಎನ್ ಒಂದು ಚಿನ್ನದ ಪದಕ ಪಡೆದಿದ್ದಾರೆ. 

ಸುಚಿತ್ರಾ
ಸುಚಿತ್ರಾ

ಈ ವಿದ್ಯಾರ್ಥಿನಿಯರನ್ನು ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಪ್ರಾಂಶುಪಾಲರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಎಲ್ಲ ಅಧ್ಯಾಪಕ ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT