ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಚರ್ಚ್‌‌‌‌‌ಗಳಲ್ಲಿ ಗುಡ್ ಫ್ರೈಡೆ ಆಚರಣೆ

Published 29 ಮಾರ್ಚ್ 2024, 13:48 IST
Last Updated 29 ಮಾರ್ಚ್ 2024, 13:48 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಮಾದಾಪುರ ಗ್ರಾಮದ ಸಿಎಸ್‌ಐ ಸಾಡೇ ಸ್ಮಾರಕ ದೇವಾಲಯದಲ್ಲಿ ಗುಡ್ ಫ್ರೈಡೆ ಅಂಗವಾಗಿ ಶುಕ್ರವಾರ ವಿಶೇಷ ಪಾರ್ಥನೆ ನಡೆಯಿತು.

 ಕ್ರೈಸ್ತ ಭಕ್ತರು ಉಪವಾಸವಿದ್ದು, ಪೂಜೆ ಪ್ರಾರ್ಥನೆ ನಡೆಸಿದರು. ಮಾನವರ ಪಾಪಗಳಿಗೋಸ್ಕರ ಯೇಸುಸ್ವಾಮಿ ಅವರನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಫ್ರೈಡೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ12 ರಿಂದ 3 ಗಂಟೆವರೆಗೆ ದೇವಾಲಯದ ಸಭಾ ಪಾಲಕರಾದ ಜಾನ್ ಸುಮತಿ ಪಾಲ್ ತಿಳಿಸಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಿಕೊಟ್ಟರು. ಪೂಜೆಯಲ್ಲಿ ಕ್ರೈಸ್ತ ಸಮುದಾಯ ಮಕ್ಕಳು, ಹಿರಿಯರು, ಮಹಿಳೆಯರು, ಭಕ್ತರು, ಸಭಾ ಪಾಲಿನ ಸಮಿತಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಗುಡ್ ಫ್ರೈಡೇ ನಿಮಿತ್ತ ದೇವಾಲಯದಲ್ಲಿ ಕ್ರೈಸ್ತ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ಸಮೀಪದ ಕಸ್ತೂರು ಸಾಡೇ ದೇವಾಲಯ, ಭೋಗಾಪುರ, ಮಂಗಲ ಹೊಸೂರು, ಬಸವಟ್ಟಿ, ದೇಶವಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ಗುಡ್‌ ಫ್ರೈಡೇ ಅಂಗವಾಗಿ ವಿಶೇಷ ಪೂಜೆ ಪಾರ್ಥನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT