ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ರಕ್ತ ಚಂದನ ಸಾಗಣೆ; ಬಂಧನ

Published 7 ಸೆಪ್ಟೆಂಬರ್ 2023, 7:28 IST
Last Updated 7 ಸೆಪ್ಟೆಂಬರ್ 2023, 7:28 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತರಕಾರಿ ವಾಹನದಲ್ಲಿ ರಕ್ತಚಂದನ ಮರದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅಧಿಕಾರಿಗಳು ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ರವಿ (47), ಚಾಮರಾಜನಗರದ ಸರಗೂರು ಮೋಳಯ ಎಸ್.ಎಂ.ಗೋವಿಂದರಾಜು (43), ಆನಂದ್ (40), ಸಿ.ಎಸ್.ಆಸ್ಕರ್ ಪಾಷ (63) ಮಹೇಂದ್ರ (32) ಬಂಧಿತ ಆರೋಪಿಗಳು. ಇವರು ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಬಂಡೀ ಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಅವರ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿ ಎನ್.ಪಿ ನವೀನ್ ಕುಮಾರ್ ನೇತೃತ್ವದಲ್ಲಿ ಮೂರು ತಂಡ ರಚಿಸಿ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ಆರೋಪಿಗಳಿಂದ ಅಂದಾಜು 50 ಕೆ.ಜಿ ತೂಕದ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಗುಂಡ್ಲುಪೇಟೆ ಬಫರ್ ಜೇನ್ ವಲಯ ದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ವೇಳೆ ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿ ರಾಮಲಿಂಗಪ್ಪ ಎಸ್, ಮುದ್ದರಾಜು ಸಿ.ಎನ್, ಭರತ್ ಜಿ.ಪಿ, ಕಿರಣ್ ಕುಮಾರ್ ಬಿ.ಎಸ್, ನವೀನ್‍ಕುಮಾರ್, ಸಿದ್ದು ಅರಿ, ರಮೇಶ್ ಎಸ್.ಮಠಪತಿ, ಗಸ್ತು ವನಪಾಲಕರಾದ ಅಭಿಲಾಷ ಡಿ, ಪರಸಪ್ಪ ಹೆಚ್ ಮಾದ, ಶೇಖರ್ ಆರ್ ಜಾದವ್, ಶ್ರೀಕಾಂತ, ಕುಮಾರ್, ಕರಿಗೌಡ, ಬಸವೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT