ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡೀಪುರದಲ್ಲಿ ಕಂಡು ಬಂದ ಚಿರತೆ ಭಿನ್ನ ಕಣ್ಣು ಹೊಂದಿಲ್ಲ: ವೈದ್ಯಾಧಿಕಾರಿ

Published : 16 ಆಗಸ್ಟ್ 2024, 15:17 IST
Last Updated : 16 ಆಗಸ್ಟ್ 2024, 15:17 IST
ಫಾಲೋ ಮಾಡಿ
Comments

ಗುಂಡ್ಲುಪೇಟೆ: ಬಂಡೀಪುರ ಸಫಾರಿ ಪ್ರದೇಶದಲ್ಲಿ ಕಂಡು ಬಂದ ಚಿರತೆಗೆ ‘ಹೆಟೆರೋಕ್ರೋಮಿಯಾ ಇರಿಡಿಯಮ್’ ಎಂಬ ಅಪರೂಪದ ಆನುವಂಶಿಕ ರೂಪಾಂತರ ಇಲ್ಲ ಎಂದು ಬಂಡೀಪುರ ಹುಲಿ ಯೋಜನೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಧೃಢಪಡಿಸಿದ್ದಾರೆ.

ಈಚೆಗೆ ಬಂಡೀಪುರ ಸಫಾರಿ ಮಾರ್ಗದಲ್ಲಿ ಕಂಡು ಚಿರತೆಯೊಂದು ‘ಹೆಟೆರೋಕ್ರೋಮಿಯಾ ಇರಿಡಿಯಮ್’ ಎಂಬ ಅಪರೂಪದ ರೂಪಾಂತರ ಹೊಂದಿದೆ. ಎಡ ಮತ್ತು ಬಲಗಣ್ಣು ಭಿನ್ನವಾಗಿವೆ’ ಎಂದು ಚಿರತೆ ಪೋಟೊ ಸೆರೆ ಹಿಡಿದಿದ್ದ ವನ್ಯಜೀವಿ ಮಂಡಳಿ ಸದಸ್ಯ ಮತ್ತು ವನ್ಯಜೀವಿ ಛಾಯಗ್ರಾಹಕ ಧ್ರುವ ಪಾಟೀಲ್ ತಿಳಿಸಿದ್ದರು. ಈ ಚಿರತೆ ಕುರಿತಾದ ಸುದ್ದಿಗಳು  ಜಾಲತಾಣ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.

‘ಚಿರತೆ ಕಣ್ಣಿನಲ್ಲಿ ಉರಿಯೂತ ಉಂಟಾಗಿತ್ತು, ಇದನ್ನು ‘ಹೆಟೆರೋಕ್ರೋಮಿಕ್ ಇರಿಡೋಸೈಕ್ಲಿಟಿಸ್’ ಎಂದು ಕರೆಯಲಾಗುತ್ತದೆ (ತಾತ್ಕಾಲಿಕ ಗಾಯವಾಗಿರುವುದರಿಂದ ತನ್ನಿಂದ ತಾನೇ ವಾಸಿಯಾಗುತ್ತಿದೆ). ಹೀಗಾಗಿ ಇದು ಸಾಮಾನ್ಯ ವಿದ್ಯಮಾನವೇ ಹೊರತು ಅಪರೂಪವಲ್ಲ ಎಂದು ಡಾ.ವಾಸೀಂ ಮಿರ್ಜಾ ಸ್ಪಷ್ಟಪಡಿಸಿದ್ದಾರೆ.  ಗಾಯದ ಸಂದರ್ಭ ಮತ್ತು ನಂತರ ತೆಗೆದ ಒಂದೇ ಚಿರತೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT