ಹನೂರು: ‘ಪಟ್ಟಣದ ಗೋಪಾಲ್ ನಾಯ್ಡು ಎಂಬವರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನು ತೆರವು ಮಾಡುವಂತೆ ನಾನು ತಹಶೀಲ್ದಾರ್ ಅವರಿಗೆ ದೂರು ನೀಡಿದ ಪ್ರಯುಕ್ತ ಸರ್ವೆ ಅಧಿಕಾರಿಗಳು ಸರ್ಕಾರಿ ಜಮೀನಿನ ಗಡಿ ಗುರುತಿಸಿದರು’ ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ತಿಳಿಸಿದ್ದಾರೆ.

ಪಟ್ಟಣದ ಸರ್ವೇ ನಂಬರ್ 155 ಬಿ 1ರಲ್ಲಿ 2.29 ಎಕರೆ ಹಳ್ಳ ಮತ್ತು 1.55 ಎಕರೆ ಸರ್ಕಾರಿ ಜಮೀನು ಇದ್ದು ಈ ಭಾಗವನ್ನು ಒತ್ತುವರಿ ಮಾಡಲಾಗಿತ್ತು. ಕೋಟ್ಯಂತರ ಬೆಲೆಯ ಸರ್ಕಾರಿ ಜಮೀನು ಮತ್ತು ಹಳ್ಳವನ್ನು ಒತ್ತುವರಿ ಮಾಡಿ, ಹಳ್ಳಕ್ಕೆ ಮಣ್ಣು ತುಂಬಿದ ಕಾರಣ ಮಳೆ ನೀರು ಸರಾಗವಾಗಿ ಹರಿಯಲು ತೊಡಕಾಗಿದೆ ಎಂದು ಆರೋಪಿಸಿ ಸುದೇಶ್ ತಹಶೀಲ್ದಾರ್ ಕಚೇರಿಗೆ ದೂರು ನೀಡಿ ಸರ್ಕಾರಿ ಜಮೀನು ಹಾಗೂ ಹಳ್ಳವನ್ನು ಉಳಿಸುವಂತೆ ಜೂನ್ ತಿಂಗಳಲ್ಲಿ ದೂರು ನೀಡಿದ್ದರು.

ತಹಶೀಲ್ದಾರ್ ಚೈತ್ರ ಅವರ ಮಾರ್ಗದರ್ಶನದಲ್ಲಿ ಹನೂರು ಪಟ್ಟಣದ ರಾಜಸ್ವ ನಿರೀಕ್ಷಕ ಶೇಷಣ್ಣ, ಭೂಮಾಪಕ ಸಿಂಗಾರ್ ಶೆಟ್ಟಿ ಹಾಗೂ ದೂರುದಾರರ ಸಮ್ಮುಖದಲ್ಲಿ ಸರ್ವೆ ನಡೆಸಿ ಹಳ್ಳ ಹಾಗೂ ಜಮೀನಿಗೆ ಗಡಿ ಗುರುತಿಸಲಾಗಿದೆ. ಹಳ್ಳ ಹಾಗೂ ಸರ್ಕಾರಿ ಜಮೀನಿಗೆ ಪ್ರತ್ಯೇಕ ನಕಾಶೆ ತಯಾರು ಮಾಡಿ , ಒತ್ತುವರಿ ಜಮೀನನ್ನು ತೆರವು ಮಾಡಿ ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

‘ ಸರ್ಕಾರಿ ಜಮೀನು ಮತ್ತು ಹಳ್ಳವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಅಧಿಕಾರಿಗಳು ಸರ್ವೆ ನಡೆಸಿ ಸರ್ಕಾರ ಆಸ್ತಿಯನ್ನು ಸಂರಕ್ಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸರ್ಕಾರಿ ಆಸ್ತಿ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.