ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರದನಹಳ್ಳಿ ತೋಂಟದ ಸಿದ್ದಲಿಂಗೇಶ್ವರ ರಥೋತ್ಸವ

Last Updated 21 ಜನವರಿ 2020, 10:37 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಇತಿಹಾಸ ಪ್ರಸಿದ್ಧ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿತು.

ಪೂಜಾ ಕಾರ್ಯಕ್ರಮ ಹಾಗೂ ರಥೋತ್ಸವಕ್ಕೆಸಂಬಂಧಿಸಿದಂತೆ ರಥದ ಬಿಡಿ ಭಾಗಗಳನ್ನು ವಿಜಯಪುರದ ಬಳಿಯ ಸಾವಳವಿಯಿಂದ ತಂದುಜೋಡಣೆ ಕಾರ್ಯ ಕೂಡ ಪೂರ್ಣಗೊಳಿಸಲಾಗಿದೆ.ರಥವು 21 ಅಡಿ ಎತ್ತರವಿದ್ದುಇದರ ನಿರ್ಮಾಣಕ್ಕೆ ಶಿಲ್ಪಿ ಬಸಪ್ಪ ಕಾಳಪ್ಪ ಬಡಗೇರ್ 9 ತಿಂಗಳು ತೆಗೆದುಕೊಂಡಿದ್ದರು. ಅಂದಾಜು ₹35 ಲಕ್ಷ ವೆಚ್ಚದಲ್ಲಿ ರಥವನ್ನು ತಯಾರಿಸಲಾಗಿದೆ.

ಪ್ರತಿ ವರ್ಷ ಸಂಕ್ರಾಂತಿ ಕಳೆದು ಏಳನೇ ದಿನಕ್ಕೆ ರಥೋತ್ಸವ ನಡೆಯುತ್ತದೆ ಅದರಂತೆ ರಥೋತ್ಸವವು ಇಂದು ನಡೆಯಲಿದೆ. ಗೋಸಲ ಪೀಠ ಪರಂಪರೆಯ ಶಿಷ್ಯ‌ ಯಡಿಯೂರು ಸಿದ್ಧಲಿಂಗೇಶ್ವರರು ಹುಟ್ಟಿದ ಸ್ಥಳಹರದನಹಳ್ಳಿ. ಈ ದೇವಸ್ಥಾನಕ್ಕೆ ಐದಾರು ಶತಮಾನಗಳ ಇತಿಹಾಸವಿದೆ.

ಜರುಗಿದ ಪೂಜಾಕೈಂಕರ್ಯ: ಸೋಮವಾರ ಮುಂಜಾನೆ 5ಗಂಟೆಯಿಂದ 6.45ಗಂಟೆಯೊಳಗೆ ಬ್ರಾಹ್ಮಿ ಲಗ್ನದಲ್ಲಿ ಗಂಗಾ ಪೂಜಾ, ಗಣಪತಿ ಪೂಜಾ, ಕಳಸದೊಂದಿಗೆ ಕಾಮದೇಸು ಸಮೇತ ದೇವಾಲಯಕ್ಕೆ ಪ್ರವೇಶ ಪಡೆಯಲಾಯಿತು.

ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಪೂಜಾಕಾರ್ಯಕ್ರಮಗಳು ಜರುಗಿತು. ಬೆಳಿಗ್ಗೆ 6.30ರಿಂದ 7.25ಗಂಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಬಳಿಕ ಪಂಚಕಳಸ, ನವಗ್ರಹ, ಅಷ್ಟದಿಕ್ಷಾಲಕ, ಏಕಾದಶರುದ್ರ. ಶ್ರೀ ಪ್ರಧಾನ ಕಳಸ ಸ್ಥಾಪನಾ ಪೂರ್ವಕ, ಅಗ್ನಿ ಪ್ರತಿಷ್ಠಾಪನೆ, ಗಣಹೋಮ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ನವಗ್ರಹ ಹೋಮ, ಮಹಾರುದ್ರ ಹೋಮಗಳು ಜರುಗಿದವು.

ಮಧ್ಯಾಹ್ನ 3.30ರಲ್ಲಿ ನಂದಿಧ್ವ, ವೀರಗಾಸೆ, ರುದ್ರ ಪಠಣದೊಂದಿಗೆ ಸುಮಂಗಲಿಯರ ಸಹಿತ 108 ಪೂರ್ಣಕುಂಭಗಳ ಪೂಜಾ ಉತ್ಸವ ಜರುಗಿತು. ಇದರೊಂದಿಗೆ ದೇವಾಲಯಕ್ಕೆ ಪ್ರವೇಶ ಪಡೆದು ಮಂಗಳಾರತಿ ಕೊಡಲಾಯಿತು.

ಸಾಂಸ್ಕೃತಿಕ, ನಾಟಕ ಪ್ರದರ್ಶನ: ಸಂಜೆ 6ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ 8 ಗಂಟೆಗೆ ತುಮಕೂರಿನ ನಾರಾಯಣ ಸ್ವಾಮಿ ಮತ್ತು ತುಂಬೆ ಕಲಾವಿದರಿಂದ ‘ಎಡೆಯೂರ ವಾಸ ಶ್ರೀಸಿದ್ದಲಿಂಗೇಶ್ವರ’ ನಾಟಕ ಪ್ರದರ್ಶನ ನಡೆಸಿಕೊಟ್ಟರು.

ರಥೋತ್ಸವಕ್ಕೆ ಚಾಲನೆ

ಇಂದು ಬೆಳಿಗ್ಗೆ 11.30ಗಂಟೆಗೆ ಅಭಿಜನ್‌ ಲಗ್ನದಲ್ಲಿ ನಂದಿಧ್ವಜ ಪೂಜೆ ಸಲ್ಲಿಸಿದ ಬಳಿಕ ನೂತನ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಡಾ. ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ಗಂಗಾಧರ ಮಹಾಸ್ವಾಮಿಗಳು ನೇತೃತ್ವವಹಿಸಲಿದ್ದಾರೆ.

ಆಶೀರ್ವಚನ: ಮಧ್ಯಾಹ್ನ 1ಗಂಟೆಗೆ ದಾಸೋಹ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಆಗಮಿಸಿದ್ದ ಪೂಜ್ಯರಿಂದ ಆಶೀರ್ವಚನ ನಡೆಯಲಿದೆ. ಸಂಜೆ 6.30ಗಂಟೆಗೆ ಸ್ವಾಮಿಗಳವರ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ವಿವಿಧ ಜಾನಪದ ಕಲಾ ತಂಡಗಳಿಂದ ಜಾನಪದ ಕಲಾಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT