ಹನೂರು: ಸಂಸ್ಥೆಯು ನೀಡುತ್ತಿರುವ ವಸ್ತುಗಳನ್ನುಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಮುಂದುವರೆದು ನಾಡಿಗೆ ಉತ್ತಮ ಕೊಡುಗೆ ನೀಡುವ ವಿದ್ಯಾರ್ಥಿಗಳಾಗಬೇಕು ಎಂದು ಹೆಲ್ಪ್ ಎ ಚೈಲ್ಡ್ ಸಂಸ್ಥೆಯ ರವಿ ತಿಳಿಸಿದರು.

ಮಿಣ್ಯಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಹೆಲ್ಪ್ ಎಜುಕೇಟ್ ಎ ಚೈಲ್ಡ್ ಸಂಸ್ಥೆಯಿಂದ ಧಾನಿಗಳಾದ ನಂದಪ್ರಸಾದ್ ಲಕ್ಷಾಂತರ ರೂಪಾಯಿ ಬೆಲೆಯ 30 ಡೆಸ್ಕ್ ಹಾಗೂ 4 ರ್ಯಾಕ್ಗಳನ್ನು ಉಚಿತವಾಗಿ ನೀಡಿದ್ದನ್ನು ವಿತರಣೆ ಮಾಡಿ ಮಾತನಾಡಿದರು.

ಸಂಸ್ಥೆಯು ಕಳೆದ ಮೂರು ವರ್ಷಗಳಿಂದಲೂ ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿರುತ್ತಾರೆ, ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಮಕ್ಕಳು ಓದಿನಲ್ಲಿ ಮುಂದೆ ಬರಬೇಕು. ಲೇಖನ ಸಾಮಗ್ರಿಗಳು ಇಲ್ಲ ಎಂಬ ಕೊರಗು ನಮ್ಮ ಗ್ರಾಮೀಣ ಭಾಗದ ಮಕ್ಕಳಲ್ಲಿ ಬರಬಾರದು. ಹಾಗಾಗಿ ಪ್ರತಿ ವರ್ಷ ಸಾವಿರಾರು ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು, ಹಾಗೂ ಹೆಣ್ಣು ಮಕ್ಕಳಿಗೆ ಅವರ ವೈಯಕ್ತಿಕ ಶುಚಿತ್ವಕ್ಕೆ ಬೇಕಾದ ವಸ್ತುಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.

ಮಿಣ್ಯಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಂ ಮುರುಗೇಶ್ ಮಾತನಾಡಿ ಈ ಕೊಡುಗೆ ಗುಡ್ಡಗಾಡು ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿದ್ದು ನಮ್ಮ ಶಾಲೆಯು ಅಭಿವೃದ್ಧಿ ಹೊಂದುವಲ್ಲಿ ಈ ಸಂಸ್ಥೆಯ ಕೊಡುಗೆ ಅನನ್ಯವಾದುದ್ದು, ಕಾಡಂಚಿನ ಗ್ರಾಮದ ಮಕ್ಕಳಿಗೆ ವಿಶೇಷವಾಗಿ ಸಂಸ್ಥೆಯು ಕಾಳಜಿ ವಹಿಸುತ್ತಿದ್ದು ಇದು ಶಾಲಾ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನವನ್ನು ಕೊಟ್ಟಂತಾಗಿದೆ. ಇವರ ಸೇವೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ಶಾಲಾ ಮಕ್ಕಳಿಗೆ ದೊರಕಲಿ, ಇನ್ನೂ ಹೆಚ್ಚು ದಾನ ಮಾಡುವ ಶಕ್ತಿ ದೇವರು ಕೊಡಲಿ ಎಂದರು.

ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರು ಮತ್ತು ಪೋಷಕರು ಮಕ್ಕಳ ಸಂಭ್ರಮವನ್ನು ನೋಡಿ ಡೆಸ್ಕ್ಗಳನ್ನು ವಿತರಿಸಿದ ಸಂಸ್ಥೆಯವರ ಸೇವೆಯನ್ನು ಪ್ರಶಂಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.