ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯದ ಐತಿಹಾಸಿಕ ಪಾರಂಪರಿಕ ಕೋಟೆಗಳು ಹಾಗೂ ಏಳು ಅದ್ಬುತ ತಾಣಗಳ ಮಾದರಿ ವಸ್ತು ಪ್ರದರ್ಶನವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿ ವೀಕ್ಷಿಸಿದರು.

ಬಳಿಕ ಮಾತನಾಡಿದ ಶಾಸಕರು ‘ಶಿಕ್ಷಣದಿಂದ ಮಾತ್ರದ ದೇಶದ ಅಭಿವೃದ್ಧಿ ಎಂಬ ಸತ್ಯವನ್ನು ಯುವಜನತೆ ಅರಿಯಬೇಕು. ಶಿಕ್ಷಣದಿಂದ ಬಡತನ ನಿರ್ಮೂಲನೆ ಮಾಡಿ ಬದುಕನ್ನೇ ಬದಲಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ವಸ್ತು ಪ್ರದರ್ಶನದಲ್ಲಿ ಅದ್ಬುತ ಐತಿಹಾಸಿಕ ಕೋಟೆ ಹಾಗೂ ತಾಣಗಳ ಮಾದರಿಯನ್ನು ನಿರ್ಮಿಸಿ ಪ್ರದರ್ಶನಕ್ಕೆ ಇರಿಸಿರುವುದು ಶ್ಲಾಘನೀಯ. ಈಜಿಪ್ಟ್ ಪಿರಮಿಡ್, ಚೀನಾ ಮಹಾಗೋಡೆ, ತೂಗುವ ಉದ್ಯಾನ, ತಾಜ್ ಮಹಲ್, ಮೈಸೂರು ಅರಮನೆ, ಜೋಗ್ ಜಲಪಾತದಂತಹ ಅದ್ಬುತ ಹಾಗೂ ಐತಿಹಾಸಿಕ ಪಾರಂಪರಿಕ ತಾಣಗಳು, ಕೋಟೆಗಳನ್ನು ಮಾದರಿಗಳಾಗಿ ತಯಾರಿಸಿರುವುದು ಮಾಹಿತಿಯುಕ್ತವಾಗಿದೆ ಎಂದರು.

7 ವರ್ಷಗಳ ಹಿಂದೆ 35 ವಿದ್ಯಾರ್ಥಿಗಳಿಂದ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಾದರಿಯಾಗಿ ಬೆಳೆವಣಿಗೆ ಹೊಂದಿದೆ. ಈಗಾಗಲೇ ಸಿಎಸ್ಆರ್ ನಿಧಿ ಬಳಸಿಕೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ವೆಂಕಟಯ್ಯನ ಛತ್ರ, ಹರದನಹಳ್ಳಿ, ಚಂದಕವಾಡಿ ಕಾಲೇಜುಗಳಿಗೂ ಅನುದಾನ ನೀಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಮಾತನಾಡಿ ವಿಜ್ಞಾನ ವಿಭಾಗದಲ್ಲಿ ವಸ್ತು ಪ್ರದರ್ಶನಗಳನ್ನು ಹೆಚ್ಚಾಗಿ ಏರ್ಪಡಿಸಲಾಗುತ್ತದೆ. ಇತಿಹಾಸ ವಿಭಾಗದಲ್ಲಿ ವಸ್ತು ಪ್ರದರ್ಶನ ಮಾಡಿರುವುದು ಸಂತಸದ ವಿಚಾರ. ಇಂತಹ ಪ್ರದರ್ಶನಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಸಹಕಾರಿಯಾಗುತ್ತದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಬಿ.ಕೆ ರವಿಕುಮಾರ್, ಸಮೀಉಲ್ಲಾ, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಡಾ. ಎನ್.ಜಿ. ಪ್ರಕಾಶ್, ಪ್ರಾಂಶುಪಾಲ ಪ್ರೊ. ಬಿ.ಎಸ್ ಮಹದೇವಸ್ವಾಮಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಯಣ್ಣ, ಉಪನ್ಯಾಸಕರಾದ ಎಂ. ರೋಹಿತ್, ಐ.ಕ್ಯು.ಎ.ಸಿ ಸಂಚಾಲಕರಾದ ಡಾ.ಲಿಖಿತಾ, ಎಸ್ ಅನುರಾಧ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.