ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರಿದ್ದು, ಅರಿವಿಲ್ಲದೇ ಅವರಿಂದ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಗ್ರಾಮವು ರಾಜ್ಯದ ಗಡಿಪ್ರದೇಶ ವಾಗಿದ್ದು, ತಮಿಳುನಾಡಿನಿಂದ ಬರುವ ಕೆಲವು ವ್ಯಕ್ತಿಗಳು ತಾವು ವೈದ್ಯರು ಎಂದು ಹೇಳಿಕೊಂಡು ಕ್ಲಿನಿಕ್ ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಪ್ರಮಾಣ ಪತ್ರ ಅವರ ಬಳಿ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಸಂಬಂಧ ಗ್ರಾಮದ ಕೆಲವು ಯುವಕರು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರತಿಯನ್ನು ‘ಪ್ರಜಾವಾಣಿ’ಗೂ ಕಳುಹಿಸಿದ್ದಾರೆ.

‘ತಮಿಳುನಾಡಿನಿಂದ ಬರುವ ಕೆಲ ವ್ಯಕ್ತಿಗಳು, ತಾವೇ ವೈದ್ಯರು, ಕಾಯಿಲೆ ಸರಿಮಾಡುತ್ತೇನೆ ಎಂದು ಜನರಿಗೆ ಚಿಕಿತ್ಸೆ ನೀಡಲು ಮುಂದಾ ಗುತ್ತಿದ್ದಾರೆ. ಸುತ್ತಮುತ್ತಲು ಆಸ್ಪತ್ರೆ ಇಲ್ಲದಿರುವುದರಿಂದ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯದ ಕಾರಣ ಗ್ರಾಮಸ್ಥರು ಅನಿವಾರ್ಯವಾಗಿ ನಕಲಿ ವೈದ್ಯರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಗ್ರಾಮದ ಯುವಕ ಅಶೋಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂವರ ಮೇಲೆ ಬೊಟ್ಟು: ಹೂಗ್ಯಂನಲ್ಲಿ ಕಾರ್ಯಾಚರಿಸುತ್ತಿರುವ ಮೂವರ ಬಗ್ಗೆ ಊರಿನ ಜನರು ಬೊಟ್ಟು ಮಾಡುತ್ತಿದ್ದಾರೆ. ಅಕ್ಕ ಪಕ್ಕದ ಊರಿನಲ್ಲಿ ಈ ಹಿಂದೆ ನಡೆದ ಕೆಲವು ಘಟನೆಗಳು ಅವರ ಅನುಮಾನಕ್ಕೆ ಬಲವಾದ ಕಾರಣ.

‘ತಿರುಪೂರು ಡಾಕ್ಟರ್ ಎಂದೇ ಕರೆಸಿಕೊಳ್ಳುವ ವ್ಯಕ್ತಿಯೊಬ್ಬರು ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ನೀಡದೇ ಬೇರೆ ಯಾವುದೋ ಔಷಧಿಗಳನ್ನು ನೀಡುತ್ತಿದ್ದಾರೆ. ಈ ಔಷಧಿಯನ್ನು ಸೇವಿಸಿದ ಕೆಲವರಿಗೆ ಮೈಮೇಲೆ ಗುಳ್ಳೆಗಳು ಬಂದಿವೆ. ಇವರಲ್ಲದೇ ಇನ್ನಿಬ್ಬರು ಪ್ರಮಾಣಪತ್ರವಿಲ್ಲದೇ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಗ್ರಾಮದ ಗೌತಮ, ರಾಘವ, ಉಪೇಂದ್ರ, ಶಿವರಾಜು ಹಾಗೂ ಮಹೇಶ ಅವರು ದೂರಿನಲ್ಲಿ ಹೇಳಿದ್ದಾರೆ.

ಗ್ರಾಮಸ್ಥರು ಓಡಿಸಿದ್ದರು:ತಿರಪೂರ್ ಡಾಕ್ಟರ್ ಎಂದು ಪ್ರಸಿದ್ಧಿ ಪಡೆದಿರುವ ವ್ಯಕ್ತಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ಇದೆ.

‘ಈ ಹಿಂದೆ ಅದೇ ವ್ಯಕ್ತಿ ಮಾರ್ಟಳ್ಳಿಯಲ್ಲೂ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದರು.ರಾತ್ರಿ ವೇಳೆ ಪಾನಮತ್ತರಾಗಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದರಿಂದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕ್ಲಿನಿಕ್ಗೆ ತೆರಳಿ ಪರಿಶೀಲನೆ ನಡೆಸಿದಾಗ, ಅವರ ಬಳಿ ಯಾವುದೇ ಪ್ರಮಾಣ ಪತ್ರ ಇಲ್ಲದಿರುವುದು ಬೆಳಕಿಗೆ ಬಂದಿತ್ತು. ನಂತರ ಗ್ರಾಮಸ್ಥರೆಲ್ಲ ಸೇರಿ ಅವರನ್ನು ಗ್ರಾಮದಿಂದ ಓಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಅನಿವಾರ್ಯ ಸ್ಥಿತಿ: ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ಹೂಗ್ಯಂ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ.

‘ಸಮೀಪದ ಕೂಡ್ಲೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ, ಸಂಜೆ 6 ಗಂಟೆ ಬಳಿಕ ಸಿಬ್ಬಂದಿಯೇ ಇರುವುದಿಲ್ಲ. ಗುಣ ಮಟ್ಟದ ಚಿಕಿತ್ಸೆ ಪಡೆಯಬೇಕು ಎಂದರೆ ನೂರಾರು ಕಿ.ಮೀ ದೂರ ಹೋಗಬೇಕು. ಆದ್ದರಿಂದ ಇಲ್ಲಿರುವ ವೈದ್ಯರ ಬಳಿಯೇ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ’ ಎಂದು ತಮ್ಮ ಅಳಲು ತೋಡಿ ಕೊಳ್ಳುತ್ತಾರೆ ಗ್ರಾಮಸ್ಥರು.

ಕಾರ್ಯಾಚರಣೆ ಮಾಡಿದ್ದ ಡಿಎಚ್ಒ

ಮಾರ್ಟಳ್ಳಿ ನಂತರ, ತಿರಪೂರ್ ಡಾಕ್ಟರ್ ಎಂದು ಕರೆಸಿಕೊಳ್ಳುವ ವ್ಯಕ್ತಿ 2014ರಲ್ಲಿ ನಾಲ್ ರೋಡ್ನಲ್ಲಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲು ಆರಂಭಿಸಿದ್ದರು. 2015ರಲ್ಲಿ ಇವರ ಬಳಿ ಚಿಕಿತ್ಸೆಗೆಂದು ಬಂದ ಮಹದೇಶ್ವರ ಬೆಟ್ಟ ಮಹಿಳೆಯೊಬ್ಬರು ಚಿಕಿತ್ಸೆ ಪಡೆದು ತಮ್ಮ ಮನೆಗೆ ತೆರಳಿದ ಬಳಿಕ ಮೃತಪಟ್ಟಿದ್ದರು.

ಇಲ್ಲಿನ ವೈದ್ಯರು ನೀಡಿದ ಚಿಕಿತ್ಸೆಯೇ ಸಾವಿಗೆ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಂಡು ವಿಜಯನ್ ಅವರುಕ್ಲಿನಿಕ್ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರು ನಕಲಿ ವೈದ್ಯರೆಂಬುದು ಕಂಡು ಬಂದಿತ್ತು. ನಾಲ್ಕು ವರ್ಷಗಳ ಬಳಿಕ ಅವರು ಹೂಗ್ಯಂನಲ್ಲಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳುತ್ತಾರೆ ಸ್ಥಳೀಯರು.

ಪರಿಶೀಲಿಸಿ ಕ್ರಮ:ಡಾ.ರವಿ

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಅವರು, ‘ಹನೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಕಲಿ ವೈದ್ಯರ ಹಾವಳಿ ಇರುವ ಬಗ್ಗೆ ದೂರುಗಳು ಬಂದಿವೆ. ವೈದ್ಯಕೀಯ ಪ್ರಮಾಣಪತ್ರ ಇಲ್ಲದೇ ಚಿಕಿತ್ಸೆ ನೀಡುವುದು ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.