ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಶಂಕರ ಜಯಂತಿ ಆಚರಣೆ

ಹಲವೆಡೆ ಪುಷ್ಪನಮನ, ಸ್ತೋತ್ರ ಪಠಣ
Last Updated 18 ಮೇ 2021, 4:11 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಹಲವೆಡೆ ಸರಳವಾಗಿ ಶಂಕರ ಜಯಂತಿಯನ್ನು ಆಚರಿಸಲಾಯಿತು.

ಇಲ್ಲಿನ ಹರದನಹಳ್ಳಿಯಲ್ಲಿರುವ ದಿವ್ಯಲಿಂಗೇಶ್ವರಸ್ವಾಮಿ ದಕ್ಷಿಣಾಮೂರ್ತಿ ಸನ್ನಿಧಾನದಲ್ಲಿ ಶಂಕರಾಚಾರ್ಯರ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಬರಹಗಾರ ಎಸ್. ಲಕ್ಷ್ಮೀನರಸಿಂಹ, ‘ಶಂಕರಾಚಾರ್ಯರು ಚಾಮರಾಜ ನಗರಕ್ಕೂ ಭೇಟಿ ನೀಡಿದ್ದರು. ಇಲ್ಲಿನ ಶಿವನಸಮುದ್ರದ ಮೀನಾಕ್ಷಿ ದೇವತೆಯ ಉಗ್ರ ಸ್ವರೂಪವನ್ನು ತೊಡೆದು ಹಾಕಿದರು. ಶ್ರೀ ಚಕ್ರವನ್ನು ಸ್ಥಾಪಿಸಿದರು. ಗರ್ಗೇಶ್ವರಿಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರು. ಇಲ್ಲಿ ಅವರ ಹೆಜ್ಜೆ ಗುರುತುಗಳಿವೆ’ ಎಂದು ಸ್ಮರಿಸಿದರು. ಅರ್ಚಕ ವೇಣುಗೋಪಾಲ್ ಇದ್ದರು.

ಚಾಮರಾಜನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಅಭಯ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಶಂಕರಾಚಾರ್ಯ ಜಯಂತಿ ಆಚರಿಸಲಾಯಿತು.

ಚಾಮರಾಜನಗರ ಅಗ್ರಹಾರದ ಪಟ್ಟಾಭೀರಾಮ ಮಂದಿರದಲ್ಲಿ ಸರಳವಾಗಿ ಶಂಕರ ಜಯಂತಿಯನ್ನು ಆಚರಿಸಲಾಯಿತು. ಶಂಕರಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಂಕರರ ಸ್ತೋತ್ರಗಳನ್ನು ಪಠಿಸಿ ಮಂತ್ರಗಳನ್ನು ಪಾರಾಯಣ ಮಾಡಲಾಯಿತು.

ಅರ್ಚಕರಾದ ಕಾರ್ತಿಕ್ ಭಾರದ್ವಾಜ್ ಸಂತೆಮರಳ್ಳಿ ವೃತ್ತದ ಆಂಜನೆಯಸ್ವಾಮಿ ದೇವಸ್ಥಾನದ ಅರ್ಚಕ ನಾಗೇಂದ್ರ. ಕಾಡುನಾರಾಯಣ ಸ್ವಾಮಿ ದೇವಸ್ಥಾನದ ಅರ್ಚಕರಾದ ರಾಮಚಂದ್ರ ಮಾರುತಿ, ಅನಂತರಾಂ, ಕಿರಣ್, ಡೈರಿಸತ್ಯ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT