ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಚಾಮರಾಜನಗರ| ಕನ್ನಡದ ಅಸ್ಮಿತೆಗಿಲ್ಲ ಧಕ್ಕೆ; ಮೂಡಿದ ಭಾಷಾ ಸಾಮರಸ್ಯ

ತಮಿಳುನಾಡು, ಕೇರಳ ಜೊತೆಗೆ ಗಡಿ ಹಂಚಿಕೊಂಡರೂ ಗಡಿ ವಿವಾದ, ಭಾಷಾ ಹೇರಿಕೆ ಇಲ್ಲ
Published : 10 ನವೆಂಬರ್ 2025, 2:29 IST
Last Updated : 10 ನವೆಂಬರ್ 2025, 2:29 IST
ಫಾಲೋ ಮಾಡಿ
Comments
ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಯೊಂದರ ಮೇಲಿನ ಇಂಗ್ಲೀಷ್ ನಾಮಫಲಕ
ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಯೊಂದರ ಮೇಲಿನ ಇಂಗ್ಲೀಷ್ ನಾಮಫಲಕ
ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇಂಗ್ಲೀಷ್ ಫಲಕಗಳ ಹಾವಳಿ
ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇಂಗ್ಲೀಷ್ ಫಲಕಗಳ ಹಾವಳಿ
‘ಮಾತೃಭಾಷೆ ಮನೆಗೆ ಸೀಮಿತ’ ಹನೂರು ತಾಲ್ಲೂಕಿನ ಗಡಿಭಾಗದಲ್ಲಿರುವ ಬಹುತೇಕ ಗ್ರಾಮಗಳ ಜನರ ಮಾತೃಭಾಷೆ ತಮಿಳಾಗಿದ್ದರೂ ಭಾಷಾ ಪ್ರೇಮ ಮನೆಗೆ ಸೀಮಿತವಾಗಿದೆ. ವ್ಯಾವಹಾರಿಕ ಹಾಗೂ ಶಿಕ್ಷಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.
–ಜಾನ್ ಡಾನ್ ಬೋಸ್ಕೋ ಮಾರ್ಟಳ್ಳಿ
‘ಕನ್ನಡ ಶಾಲೆಗಳು ಉಳಿಯಬೇಕು’ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿಲ್ಲವಾದರೂ ಕನ್ನಡ ಭಾಷೆಯನ್ನು ಮತ್ತಷ್ಟು ಸದೃಢಗೊಳಿಸುವ ಅಗತ್ಯವಿದೆ. ಗುಂಡ್ಲುಪೇಟೆ ತಾಲ್ಲೂಕಿನ ಪೆರಳೂರಿನಲ್ಲಿ 1869ರಲ್ಲಿ ಸ್ಥಾಪನೆಯಾದ ಕನ್ನಡ ಶಾಲೆ ಸೇರಿದಂತೆ ಜಿಲ್ಲೆಯಲ್ಲಿರುವ ಶತಮಾನಕಂಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ.
–ಕೆ.ವೆಂಕಟರಾಜು ಸಾಹಿತಿ
ಗಡಿ ಸೌಹಾರ್ದತೆ ರಾಜ್ಯದ ಇತರೆ ಗಡಿ ಜಿಲ್ಲೆಗಳಲ್ಲಿ ಕಾಣಲು ಸಾಧ್ಯವಿಲ್ಲದ ಭಾಷಾ ಸಾಮರಸ್ಯ ಗಡಿ ಸೌಹಾರ್ದತೆಯನ್ನು ಚಾಮರಾಜನಗರದಲ್ಲಿ ಕಾಣಬಹುದು. ಕೇರಳ ತಮಿಳುನಾಡು ಜೊತೆಗೆ ಗಡಿ ಹಂಚಿಕೊಂಡರೂ ಜಿಲ್ಲೆಯಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡ ಉಳಿದು ಬೆಳೆಯಲು ಕನ್ನಡಪರ ಸಂಘಟನೆಗಳ ಪಾತ್ರ ದೊಡ್ಡದಿದೆ.
  –ಚಾರಂ ಶ್ರೀನಿವಾಸ ಗೌಡ ಕನ್ನಡಪರ ಹೋರಾಟಗಾರ
‘ಭಾಷಾ ಸಾಮರಸ್ಯ ಗಟ್ಟಿ’ ತಮಿಳು ಹಾಗೂ ಕೇರಳ ಭಾಷಿಕರು ಕನ್ನಡಿಗರೊಂದಿಗೆ ಬೆರೆತು ಸ್ಥಳೀಯರೇ ಆಗಿದ್ದಾರೆ. ನೆಲ ಜಲ ಭಾಷೆಯ ವಿಚಾರದಲ್ಲಿ ಸೌಹಾರ್ದದ ವಾತಾವರಣ ಇದೆ. ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಸಂವಹನ ಸೇವೆ ಸಿಗಬೇಕು. ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾದರೆ ಹೋರಾಟದ ಕೂಗು ಮೊಳಗಲಿದೆ.
–ಚಾ.ಗು.ನಾಗರಾಜ್‌ ಕನ್ನಡಪರ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT