ಅರಣ್ಯದೊಳಗೆ ಜಾನುವಾರು ಮೇಯಿಸಲು ಅನುಮತಿ ನೀಡಿ ಸರ್ಕಾರ ಹೊರಡಿಸಿರುವ ಪರಿಷ್ಕೃತ ಆದೇಶ ಕೈತಲುಪಿದ ಬಳಿಕ ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು
ಭಾಸ್ಕರ್ ಎಂಎಂ ಹಿಲ್ಸ್ ವಲಯದ ಡಿಸಿಎಫ್
ಅರಣ್ಯದೊಳಗೆ ಜಾನುವಾರು ಮೇಯಿಸಲು ಸರ್ಕಾರ ನಿರ್ಬಂಧ ಹಾಕಬಾರದು. ತಲಾ ತಲಾಂತರದಿಂದಲೂ ಕಾಡಂಚಿನ ರೈತರು ಅರಣ್ಯವನ್ನೇ ನಂಬಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಡಿನೊಳಗೆ ಜಾನುವಾರು ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ ಕಾಡುಪ್ರಾಣಿಗಳು ಗ್ರಾಮ ಹಾಗೂ ರೈತರ ಜಮೀನಿಗೆ ನುಗ್ಗದಂತೆ ಅರಣ್ಯ ಇಲಾಖೆ ಕ್ರಮವಹಿಸಬೇಕು.
ಶಾಂತಕುಮಾರ್ ರೈತ ಚೆನ್ನೂರು
ಸರ್ಕಾರದ ನಿರ್ಧಾರದಿಂದ ಜಾನುವಾರುಗಳ ಸಾಕಾಣಿಕೆಯನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ರೈತರು ಬೀದಿಗೆ ಬರಲಿದ್ದಾರೆ. ಕಾಡಿನೊಳಗೆ ಜಾನುವಾರು ಮೇಯಿಸಲು ಅನುಮತಿ ನೀಡದಿದ್ದರೆ ಗ್ರಾಮಕ್ಕೊಂದು ಗೋಶಾಲೆ ತೆರೆದು ಮೇವು ಒದಗಿಸಲಿ. ವನ್ಯ ಪ್ರಾಣಿಗಳು ಜಮೀನುಗಳಿಗೆ ಬಾರದಂತೆ ನೋಡಿಕೊಳ್ಳಲಿ.
ಬಸವರಾಜು ಕುರಟ್ಟಿ ಹೊಸೂರು
ಹನೂರು ತಾಲ್ಲೂಕಿನ ಬಹುತೇಕ ಗ್ರಾಮಗಳು ಅರಣ್ಯದ ಅಂಚಿನೊಳಗಿವೆ. ಬಹುತೇಕರು ಕೃಷಿಯ ಜೊತೆಗೆ ಜಾನುವಾರು ಸಾಕಣೆ ಮಾಡುತ್ತಿದ್ದಾರೆ. ಕಾಡಿನೊಳಗೆ ಜಾನುವಾರು ಮೇಯಿಸಲು ನಿರ್ಬಂಧ ಹೇರಿದರೆ ರೈತರು ಹೈನುಗಾರಿಕೆ ತ್ಯಜಿಸಬೇಕಾಗುತ್ತದೆ.
ಅಮ್ಜದ್ ಖಾನ್ ಗಂಗನದೊಡ್ಡಿ
ರೈತರು ದನಕರುಗಳನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಮೇವಿಗೆ ಜಾನುವಾರುಗಳನ್ನು ಕಾಡಿಗೆ ಬಿಡುತ್ತೇವೆಯೇ ಹೊರತು ಕಾಡು ನಾಶ ಮಾಡುವುದಕ್ಕಲ್ಲ. ಕಾಡಿನೊಳಗೆ ಪ್ರವೇಶ ನಿರ್ಬಂಧಿಸುವ ಅರಣ್ಯ ಸಚಿವರ ನಿರ್ಧಾರ ಸರಿಯಲ್ಲ.