ಗುರುವಾರ , ನವೆಂಬರ್ 26, 2020
22 °C

ಕನ್ನಡ ಎಂಎ: ಕೆಂಪರಾಜುಗೆ ಆರು ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಯಡಪುರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ, ಕಾಗಲವಾಡಿಯ ಕೆ.ಜಿ.ಕೆಂಪರಾಜು ಅವರು 2019ನೇ ಸಾಲಿನ ಕನ್ನಡ ಎಂ.ಎನಲ್ಲಿ ಆರು ಚಿನ್ನದ ಪದಕಗಳು ಹಾಗೂ ನಾಲ್ಕು ನಗದು ಬಹುಮಾನಗಳನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ.

ಇತ್ತೀಚೆಗೆ ನಡೆದ ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಪದವಿಯನ್ನು ಸ್ವೀಕರಿಸಿದ್ದಾರೆ. ಕೆಂಪರಾಜು ಅವರು 2017–18ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದರು.

ವಿದ್ಯಾರ್ಥಿಯ ಸಾಧನೆಗೆ ಕೇಂದ್ರ ನಿರ್ದೇಶಕ ಪ್ರೊ.ಶಿಬಸವಯ್ಯ, ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಮೂರ್ತಿ ಹನೂರು, ಪ್ರಾಧ್ಯಾಪಕದ  ಡಾ.ಪಿ.ಮಹೇಶ್‌ಬಾಬು, ಬಸವಣ್ಣ ಎಂ.ಎಸ್‌., ಗುರುರಾಜು ಬಿ, ರಾಣಿ ಅಭಿನಂದಿಸಿದ್ದಾರೆ.  

‘ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗಕ್ಕೆಂದೇ ನಿರ್ಮಿಸಲಾದ ‘ದೇವಚಂದ್ರ ಗ್ರಂಥಾಲಯ’ದಿಂದ ಅಧ್ಯಯನಕ್ಕೆ ತುಂಬಾ ಅನುಕೂಲವಾಗಿದೆ’ ಎಂದು ಕೆಂಪರಾಜು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು