ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಗಾಳಿಪಟ ಹಬ್ಬ ಆಚರಣೆ

Published 1 ಜುಲೈ 2023, 7:57 IST
Last Updated 1 ಜುಲೈ 2023, 7:57 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ಎಂಜಿಎಸ್‌ವಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಮರಡಿಗುಡ್ಡದಲ್ಲಿ ಶುಕ್ರವಾರ ಗಾಳಿಪಟದ ಹಬ್ಬ ಆಚರಿಸಿದರು.

ಇಲ್ಲಿನ ಜನರು ಬಣ್ಣ ಬಣ್ಣದ ಪಟಗಳನ್ನು ಬಾನಂಗಳಕ್ಕೆ ಹಾರಿಸಿದರು. ನೆಚ್ಚಿನ ನಟರ ಚಿತ್ರ, ಪಕ್ಷಿಗಳ ಚಿತ್ರ, ಕಾರ್ಟೂನ್ ಚಿತ್ರವುಳ್ಳ ಪಟಗಳನ್ನು ಹಾರಿಸುವ ಮೂಲಕ ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು.

ಸುಮಾರು ಒಂದು ಅಡಿಯಿಂದ ಹಿಡಿದು ಎಂಟು, ಹತ್ತು ಅಡಿಯವರಿಗಿನ ಗಾಳಿಪಟಗಳನ್ನು ಹಾರಿಸಿ ಖುಷಿಪಟ್ಟರು. ಇನ್ನೂ ಕೆಲವರು ಮೈದಾನಕ್ಕೆ ಕುಟುಂಬ ಸಮೇತ ಆಗಮಿಸಿ ಅಲ್ಲಿದ್ದ ತಿಂಡಿ ತಿನಿಸುಗಳನ್ನು ಸವಿದು ಪಟಗಳು ಬಾನಂಗಳದಲ್ಲಿ ಹಾರಾಡುವುದನ್ನು ನೋಡುತ್ತಾ ಸಂಭ್ರಮಿಸಿ ಮಕ್ಕಳ ಜೊತೆ ಕಾಲಕಳೆದರು.

‘ಮದುವೆಯಾದ ನವದಂಪತಿಗಳು ಈ ಗಾಳಿಪಟದ ಹಬ್ಬದ ದಿನದಂದು ಇಲ್ಲಿನ ಮರಡಿಗುಡ್ಡ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಪಟಗಳನ್ನು ಹಾರಿಸಿ ಹೋಗುವುದು ಇಲ್ಲಿನ ಸಾಂಪ್ರದಾಯವಾಗಿದೆ’ ಎಂದು ಹಿರಿಯ ನಾಗರಿಕ ವೆಂಕಟನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಳಿಪಟದ ಹಬ್ಬದ ದಿನದಂದು ಯಾವುದೇ ಅನಾಹುತವಾಗದಂತೆ ಪೊಲೀಸರು ಬಿಗಿಭದ್ರತೆ ಒದಗಿಸಿದರು. ಮುಂಜಾಗ್ರತಾ ಕ್ರಮವಾಗಿ ಸೆಸ್ಕ್ ಇಲಾಖೆಯವರು ಹಬ್ಬದ ಹಿನ್ನೆಲೆ ಎರಡು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT