ಕೊಳ್ಳೇಗಾಲ: ತಾಲ್ಲೂಕಿನ ಹೊಸ ಹಂಪಾಪುರ ಹಾಗೂ ಮುಳ್ಳೂರು ಗ್ರಾಮದ ರಸ್ತೆಯ ಹೊನ್ನಹೊಳೆ ಸೇತುವೆಯ ಮೇಲಿಂದ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನೀರಿಗೆ ಜಿಗಿದಿದ್ದಾನೆ.

ಹೊಸಹಂಪಾಪುರ ಗ್ರಾಮದ ಕೂಲಿ ಕಾರ್ಮಿಕ ವಿಷಕಂಠಮೂರ್ತಿ (33) ಎಂಬಾತ ನೀರಿಗೆ ಹಾರಿದ ವ್ಯಕ್ತಿ.

ಈತ ತನ್ನ ಸ್ನೇಹಿತನ ಜೊತೆ ಸೇತುವೆ ಮೇಲಿಂದ ಮೀನನ್ನು ಹಿಡಿಯುತ್ತಿದ್ದನು. ಕುಡಿದ ಮತ್ತಿನಲ್ಲಿ ಜೋರಾಗಿ ಕಿರುಚಿಕೊಂಡು ನೀರಿಗೆ ಧುಮುಕಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಎರಡು-ಮೂರು ತಾಸು ಶೋಧ ನಡೆಸಿದರು, ವ್ಯಕ್ತಿ ಪತ್ತೆಯಾಗಿಲ್ಲ. ಆತನ ಪತ್ನಿ ರತ್ನ ನಾಪತ್ತೆ ದೂರನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.