ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ನಗರದ ರಾಮಮಂದಿರ ಮುಂಭಾಗ ಪ್ರತಿಷ್ಠಾಪಿಸಿರುವ ಗಣಪತಿಗೆ ಮುಸ್ಲಿಂ ಮುಖಂಡರು ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆದರು. ಮುಖಂಡ ನಿಸಾರ್ ಅಹಮದ್ ಗಣೇಶನ ಮೂರ್ತಿಗೆ ಮಂಗಳಾರತಿ ಬೆಳಗಿ ಗೌರಿ–ಗಣೇಶ ಹಬ್ಬದ ಶುಭಾಶಯ ತಿಳಿಸಿ ಸಿಹಿ ವಿನಿಯಮ ಮಾಡಿಕೊಂಡರು.

ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಮಹಮ್ಮದ್ ಇಮ್ದಾದ್ ಉಲ್ಲ ಮಾತನಾಡಿ, ‘ತಾಲ್ಲೂಕಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸಹೋದರರಂತೆ ಬದುಕುತ್ತಿದ್ದು ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಿದ್ದೇವೆ. ಸಮಾಜದಲ್ಲಿ ದ್ವೇಷಬಿತ್ತುವವರ ಮಾತಿಗೆ ಕಿವಿಗೊಡದೆ ಸೌಹಾರ್ದಯುತವಾಗಿ ಬದುಕೋಣ. ಹಿಂದೂಗಳ ಹಬ್ಬಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ’ ಎಂದರು.

ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಟಿ.ಎಸ್.ರಾಘವನ್ ಗಣಪತಿ ಪ್ರತಿಷ್ಠಾಪಿಸಿದ್ದಾರೆ. ಈ ಸಂದರ್ಭ ನಗರಸಭೆ ಸದಸ್ಯರಾದ ಶಾಂತರಾಜು,, ಅನ್ಸರ್ ಬೇಗ್, ಮುಖಂಡರಾದ ನಟರಾಜು ಮಾಳಿಗೆ, ಪ್ರಭುಸ್ವಾಮಿ, ಇನಾಯತ್ ಪಾಷ, ಮನ್ಸೂರ್ ಪಾಷ, ಮೊಹಮ್ಮದ್ ಇಮ್ದಾದ್ ಉಲ್ಲಾ, ನಿಸಾರ್ ಅಹಮದ್, ಆರೀಪ್ ಉಲ್ಲಾ, ವಸೀಮ್, ಮಹಮ್ಮದ್ ಅತೀಖ್, ಶಹದಬ್ ಅಹಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.