ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಚಿಂತನೆಗಳ ಅನುಷ್ಠಾನ ಅಗತ್ಯ: ಆರ್.ಜಯಪ್ರಕಾಶ್

Published 30 ಜನವರಿ 2024, 14:32 IST
Last Updated 30 ಜನವರಿ 2024, 14:32 IST
ಅಕ್ಷರ ಗಾತ್ರ

ಯಳಂದೂರು:‌ ‘ಕ್ರೂರ ವ್ಯಕ್ತಿತ್ವದ ಮನುಷ್ಯರನ್ನು ಅನುನಯದಿಂದ ಸಾತ್ವಿಕ ವ್ಯಕ್ತಿಯನ್ನಾಗಿ ಬದಲಿಸುವ ಶಕ್ತಿ ಇರುವ ಏಕೈಕ ಚಿಂತಕ ಗಾಂಧಿ ಮಹಾತ್ಮ. ಭಾರತದ ಚರಿತ್ರೆಯಲ್ಲಿ ಬಾಪು ಹೋರಾಟದ ಬದುಕಿನ ಸರಳ ತತ್ವ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಆರ್.ಜಯಪ್ರಕಾಶ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವೋದಯ (ಹುತಾತ್ಮ) ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಡಿ ವಿಶ್ವಕ್ಕೆ ಇವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಮಹತ್ವವನ್ನು ತಿಳಿಸಬೇಕಿದೆ. ಅವರ ಸರಳ ಬದುಕು ಮತ್ತು ಉನ್ನತ ಚಿಂತನೆಯ ಮಹತ್ವವನ್ನು ಜೀವನದ ಉದ್ದಕ್ಕೂ ಪಾಲಿಸಬೇಕಿದೆ. ಪರಿಸರ ಸಂರಕ್ಷಣೆ, ಮಾತೃಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಯೋಗ ನಡೆಸುತ್ತಲೇ ಶ್ರಮ ಸಂಸ್ಕೃತಿಗೆ ಗಾಂಧೀಜಿ ಪ್ರಥಮ ಸ್ಥಾನ ನೀಡಿದ್ದರು’ ಎಂದರು.

‘ದೇಶದ ಏಕತೆ, ಸಮಗ್ರತೆ ಮತ್ತು ಸರ್ವಧರ್ಮ ಸಮಭಾವದ ಅಗತ್ಯವನ್ನು ತಿಳಿಸಿ, ಆಡಂಬರ ರಹಿತ ಬದುಕು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಪಣತೊಟ್ಟರು’ ಎಂದು ಹೇಳಿದರು.

ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT