ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಹೆಚ್ಚಿದ ಆವಕ; ಇಳಿದ ಮಾವಿನ ಧಾರಣೆ

ಹೂವಿನ ಬೆಲೆಯ ಮೇಲೆ ಮಳೆಯ ಪರಿಣಾಮ, ಮತ್ತೆ ಬೀನ್ಸ್‌ ದುಬಾರಿ
Published 13 ಮೇ 2024, 15:58 IST
Last Updated 13 ಮೇ 2024, 15:58 IST
ಅಕ್ಷರ ಗಾತ್ರ

ಚಾಮರಾಜನಗರ: ಹಣ್ಣಿನ ಮಾರುಕಟ್ಟೆಗೆ ಮಾವಿನ ಹಣ್ಣುಗಳ ಪೂರೈಕೆ ಹೆಚ್ಚಾಗಿದ್ದು, ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. 

ಹಾಪ್‌ಕಾಮ್ಸ್‌ನಲ್ಲಿ ಮಾವಿನ ಹಣ್ಣುಗಳ ಧಾರಣೆಯಲ್ಲಿ ಕೆಜಿಗೆ ₹20ರಷ್ಟು ಕಡಿಮೆಯಾಗಿದೆ. ಬಾದಾಮಿ, ರಸಪುರಿ ಹಣ್ಣುಗಳ ಧಾರಣೆ ಕೆಜಿಗೆ ₹120 ಇದ್ದರೆ, ಸಿಂಧೂರ, ಬೈಗನ್‌ಪಲ್ಲಿ, ಮಲ್ಲಿಕಾ ತಳಿಯ ಹಣ್ಣುಗಳು ₹100 ಸಿಗುತ್ತಿದೆ. 

ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳು ಬರುತ್ತಿದೆ. ಸಾಕಷ್ಟು ಹಣ್ಣುಗಳು ಲಭ್ಯವಿರುವುದರಿಂದ ಬೇಡಿಕೆ ಹೆಚ್ಚಿಲ್ಲ. ಹೀಗಾಗಿ ಬೆಲೆ ಇಳಿಮುಖವಾಗಿದೆ ಎಂದು ಹಾಪ್‌ಕಾಮ್ಸ್‌ ವ್ಯಾಫಾರಿ ಮಧು ಹೇಳಿದರು. 

ಹೊರ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳ ಬೆಲೆ ಸ್ವಲ್ಪ ಜಾಸ್ತಿಯೇ ಇದೆ. ಹಣ್ಣಿನ ವ್ಯಾಪಾರಿಗಳು ಬಾದಾಮಿಗೆ ಕೆಜಿಗೆ ₹160, ರಸಪುರಿ, ಮಲ್ಲಿಕಾ, ಮಲಗೋಬಾ ಹಣ್ಣುಗಳಿಗೆ ತಲಾ ₹140 ಹೇಳುತ್ತಿದ್ದಾರೆ. 

ಮಾರುಕಟ್ಟೆಯಲ್ಲಿ ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಮಳೆ ಶುರುವಾಗಿ ವಾತಾವರಣದ ಉಷ್ಣತೆ ಕಡಿಮೆಯಾಗಿರುವುದರಿಂದ ಕಲ್ಲಂಗಡಿ ಕಣ್ಣು, ಖರಬೂಜಕ್ಕೆ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. 

ಬೀನ್ಸ್‌ ಮತ್ತೆ ತುಟ್ಟಿ: ತರಕಾರಿಗಳ ಮಾರುಕಟ್ಟೆಯಲ್ಲಿ ಬೀನ್ಸ್‌ ಧಾರಣೆ ಮತ್ತೆ ಜಾಸ್ತಿಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಬೀನ್ಸ್‌ಗೆ ₹160 ಇದೆ. ಹೋದ ವಾರ ₹120 ಇತ್ತು. 

ಉಳಿದ ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಟೊಮೆಟೊ ₹30, ಕ್ಯಾರೆಟ್‌ ₹60, ಮೂಲಂಗಿ ₹60, ಹಸಿಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ ಕೆಜಿಗೆ ₹80 ಇದೆ. 

ಹೂವಿನ ಧಾರಣೆ ಏರಿಳಿ‌ತ: ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳ ಧಾರಣೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಮಳೆಯಾಗುತ್ತಿರುವುದರಿಂದ ಸುಗಂಧರಾಜ, ಚೆಂಡುಹೂವು, ಸೇವಂತಿಗೆ ಧಾರಣೆಯಲ್ಲಿ ಇಳಿಕೆಯಾಗಿದೆ. ಕನಕಾಂಬರಕ್ಕೆ ಬೇಡಿಕೆ ಇರುವುದರಿಂದ ಬೆಲೆ ಜಾಸ್ತಿ ಇದೆ. 

‘ಮಳೆ ಬಂದ ತಕ್ಷಣ ಸುಗಂಧರಾಜ ಹೂವಿನ ಇಳುವರಿ ಹೆಚ್ಚಾಗುತ್ತದೆ. ಪೂರೈಕೆ ಜಾಸ್ತಿಯಾಗುವುದರಿಂದ ಬೆಲೆ ಕುಸಿಯುತ್ತದೆ. ಅದೇ ರೀತಿ ಚೆಂಡು ಹೂ, ಸೇವಂತಿಗೆ ಹೂವಿಗೆ ಮಳೆ ಬಿದ್ದರೆ, ಹೆಚ್ಚು ದಿನಕ್ಕೆ ಇಡುವುದಕ್ಕೆ ಆಗುವುದಿಲ್ಲ. ಒಂದೇ ದಿನಕ್ಕೆ ಕೊಳೆಯುತ್ತದೆ. ಹೀಗಾಗಿ, ಗ್ರಾಹಕರು ಖರೀದಿ ಮಾಡುವುದಿಲ್ಲ. ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ, ಕಳೆದ ವಾರಕ್ಕೆ ಹೋಲಿಸಿದರೆ ಸೇವಂತಿಗೆ, ಚೆಂಡುಹೂ, ಸುಗಂಧರಾಜದ ಬೆಲೆ ಇಳಿದಿದೆ’ ಎಂದು ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ಲಭ್ಯ ಕಲ್ಲಂಗಡಿ ಕಣ್ಣು, ಖರಬೂಜಕ್ಕೆ ಬೇಡಿಕೆ ಸ್ವಲ್ಪ ಕಡಿಮೆ ಸುಗಂಧರಾಜ, ಚೆಂಡುಹೂವು, ಸೇವಂತಿಗೆ ಧಾರಣೆ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT