ಮಹದೇಶ್ವರ ಬೆಟ್ಟ: ಬೆಟ್ಟ ವ್ಯಾಪ್ತಿಯ ಮೆಂದರೆ ಗ್ರಾಮದಲ್ಲಿ ನೆಲೆಸಿರುವ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ವರದಿ ತಯಾರಿಸುವುದಕ್ಕಾಗಿ ಜಿಲ್ಲಾಡಳಿತ ಗ್ರಾಮದಲ್ಲಿ ಸೋಮವಾರದಿಂದ ಸರ್ವೆ ಕಾರ್ಯ ಆರಂಭಿಸಿದೆ.

ಕಂದಾಯ ಇಲಾಖೆ, ಭೂಮಾಪನ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿಯಾಗಿ ಸರ್ವೆ ನಡೆಸುತ್ತಿದ್ದಾರೆ. ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ.

ಮೆಂದರೆಯಲ್ಲಿರುವ ಪ್ರತಿಯೊಂದು ಮನೆಯಲ್ಲೂ ಎಷ್ಟು ಜನರು ವಾಸವಾಗಿದ್ದಾರೆ, ಅವರಿಗೆ ಇರುವ ಚರ ಮತ್ತು ಸ್ಥಿರಾಸ್ತಿ, ಅವರು ಸಾಕಿರುವ ಪ್ರಾಣಿಗಳು, ಕುರಿ ಕೋಳಿ ಇನ್ನಿತರ ಎಲ್ಲ ಮಾಹಿತಿಯನ್ನು ಮನೆಯವರಿಂದ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ಮೂರು ದಿನಗಳ ಕಾಲ ಮಾಹಿತಿ ಸಂಗ್ರಹಿಸಿದ ನಂತರ ಸರ್ವೆ ನಡೆಸಿದವರು ಉಪವಿಭಾಗಾಧಿಕಾರಿಯವರಿಗೆ ವರದಿ ನೀಡಲಿದ್ದಾರೆ. ಅವರು ಕ್ರೋಡೀಕರಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸಲ್ಲಿಸಲಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನದ ದಿನ ಏಪ್ರಿಲ್ 26ರಂದು ಇಂಡಿಗನತ್ತದಲ್ಲಿ ಘರ್ಷಣೆ ನಡೆದ ಬಳಿಕ, ಮೆಂದರೆಯ ಗಿರಿಜನರು ತಮಗೆ ಬೇರೆ ಕಡೆಯಲ್ಲಿ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದರು.

ಅವರ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಉಪವಿಭಾಗಾಧಿಕಾರಿಯವರಿಗೆ ಸೂಚಿಸಿದ್ದಾರೆ. ಅದರಂತೆ ಸರ್ವೆ ಆರಂಭವಾಗಿದೆ.

ಕಂದಾಯ ನಿರೀಕ್ಷಿಕ ಶಿವಕುಮಾರ್, ಪಿಡಿಒ ಕಿರಣ್ ಕುಮಾರ್ ಗ್ರಾಮಲೆಕ್ಕಿಗ ವಿನೋದ್ ಕುಮಾರ್, ಅರಣ್ಯ ರಕ್ಷಕ ಸಂಗಪ್ಪ, ದ್ವಿತೀಯ ಧರ್ಜೆ ಸಹಾಯಕ ಸತೀಶ್, ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯ ಶಿಕ್ಷಕ ಚೆಲುವರಾಜು, ಶಿಕ್ಷಕ ಸುಧಾಕರ್, ಭೂಮಾಪಕ ಶ್ರಿಣಿವಾಶ್ ಮೂರ್ತಿ, ಅಂಗನವಾಡಿ ಕಾರ್ಯಕರ್ತೆ ಮಾದೇವಿ ಇತರರು ಸರ್ವೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.