ಚಾಮರಾಜನಗರ: ಗಡಿ ಜಿಲ್ಲೆಚಾಮರಾಜನಗರದ ಪ್ರವಾಸಿ ತಾಣಗಳ ಪಟ್ಟಿಗೆ ತಾಲ್ಲೂಕಿನ ನರಸಮಂಗಲ ಗ್ರಾಮದ ಶ್ರೀರಾಮಲಿಂಗೇಶ್ವರ (ರಾಮೇಶ್ವರ) ದೇವಾಲಯವೂ ಸೇರುತ್ತದೆ.

ಪ್ರವಾಸಿ ತಾಣವಾಗಿದ್ದರೂ, ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರಿಗೆ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

1,500 ವರ್ಷಗಳ ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ವಿಶೇಷವೆಂದರೆ ಸಪ್ತಮಾತೃಕೆಯರ ವಿಗ್ರಹಗಳು. ದೇವತೆಗಳು ಒಟ್ಟಾಗಿರುವ ವಿಗ್ರಹಗಳು ಕಂಡುಬರುವುದಿಲ್ಲ. ಈ ದೇವಾಲಯದ ಹಿಂಭಾಗದ ಮಂಟಪದಲ್ಲೇ ಸಪ್ತ ಮಾತೃಕೆಯರು ಕುಳಿತಿದ್ದಾರೆ.

ಅಂತರರಾಷ್ಟ್ರೀಯ ಕಲಾಮೇಳದಲ್ಲಿಪ್ರದರ್ಶನ: ಈ ದೇಗುಲದಲ್ಲಿರುವ ಸಪ್ತ ಮಾತೃಕೆಯರ ವಿಗ್ರಹಗಳು 15 ವರ್ಷಗಳ ಹಿಂದೆ ಬೆಲ್ಜಿಯಂನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಕಲಾ ಮೇಳದಲ್ಲಿ ಪ್ರದರ್ಶನಗೊಂಡು ನಾಡಿನ ಹಿರಿಮೆಗೆ ಪಾತ್ರವಾಗಿತ್ತು. ಬಳಿಕ ದೇವಾಲಯದ ಆವರಣದಲ್ಲಿ ಮಂಟಪ ನಿರ್ಮಿಸಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಲಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಸ್ಥಳ ಪುರಾಣ: 8ನೇ ಶತಮಾನದಲ್ಲಿಗಂಗರು ನಿರ್ಮಾಣ ಮಾಡಿರುವ ಸುಂದರ ದೇವಾಲಯಗಳಲ್ಲಿ ಇದೂ ಒಂದು.ಅವರ ಹಾಗೂ ಹೊಯ್ಸಳರ ಆಡಳಿತಾವಧಿಯಲ್ಲಿ ಈ ಗ್ರಾಮಕ್ಕೆ ‘ನರಸಿಂಹ ಮಂಗಲ’ ಎಂದು ಹೆಸರಿತ್ತು. ಕಾಲ ಕಳೆದಂತೆ ನರಸಮಂಗಲ ಆಯಿತು.

ಈ ದೇವಾಲಯದಲ್ಲಿನ ಶಿವಲಿಂಗವು 6 ಅಡಿ ಎತ್ತರ12 ಅಡಿಗಳ ಸುತ್ತಳತೆ ಹೊಂದಿದೆ. ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಬತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನವನ್ನು ಹೋಲುವ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುತ್ತದೆ. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ. ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಶಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ.

ರಾಷ್ಟ್ರೀಯ ಸ್ಮಾರಕ: ಜಿಲ್ಲೆಯ ಆಲೂರಿನ ಅರ್ಕೇಶ್ವರ ದೇವಾಲಯ, ಯಳಂದೂರಿನ ಗೌರೀಶ್ವರ ದೇವಾಲಯ, ಗುಂಡ್ಲುಪೇಟೆ ವಿಜಯ ನಾರಾಯಣ ದೇವಾಲಯದೊಂದಿಗೆರಾಮಲಿಂಗೇಶ್ವರದೇವಾಲಯವೂ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಈ ದೇವಾಲಯವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ.

7.20 ಎಕರೆ ಪ್ರದೇಶದಲ್ಲಿರುವ ಈ ದೇವಾಲಯ, ಇಲಾಖೆಯಿಂದ ಜೀರ್ಣೋದ್ಧಾರ ಆಗುತ್ತಿದೆ. ದೇವಾಲಯದ ಗೋಪುರ ಹಾಗೂ ಮೂರ್ತಿಗಳನ್ನು ಯಥಾಸ್ಥಿತಿ ಉಳಿಸಿಕೊಂಡು ಸುತ್ತಮುತ್ತಲೂ ಉದ್ಯಾನ ನಿರ್ಮಾಣ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ.ಈಗಾಗಲೇ ದೇವಾಲಯದ ಬಳಿ ಕಾಂಪೌಂಡ್ ನಿರ್ಮಿಸಲಾಗಿದೆ.

ವಿರೂಪ ಮೂರ್ತಿಗಳು: ದೇಗುಲದ ಗೋಪುರದಲ್ಲಿರುವ ಶಿಲ್ಪಗಳು ಈಗ ವಿರೂಪಗೊಂಡಿವೆ. ಅವುಗಳ ದುರಸ್ತಿ ಕಾರ್ಯ ಸೇರಿದಂತೆ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿರೂಪಿಸುವುದು ಪುರಾತತ್ವ ಇಲಾಖೆಯ ಉದ್ದೇಶ.

ಕೇಂದ್ರ ಸರ್ಕಾರದಿಂದ ಆದೇಶ ಬಂದ ನಂತರ ಇಲಾಖೆ ಹಂತ ಹಂತವಾಗಿ ಜೀರ್ಣೋದ್ಧಾರ ಕಾರ್ಯ ಆರಂಭಿಸಲಿದೆ. ಪ್ರಸ್ತುತ ದೇಶದಾದ್ಯಂತ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಸುತ್ತಲೂ ಬೇಲಿ ಹಾಕುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಮಲಿಂಗೇಶ್ವರ ದೇವಾಲಯದಲ್ಲೂ ಕೆಲಸ ನಡೆಯಲಿದೆ ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯುಗಾದಿ ಸಂದರ್ಭದಲ್ಲಿ ಅಶ್ವಿನಿ ಮಳೆ ಆರಂಭವಾದ ವಾರದೊಳಗೆ ಗ್ರಾಮಸ್ಥರೆಲ್ಲರೂ ಕೂಡಿ ಇಲ್ಲಿ ಪೂಜಾ ಕಾರ್ಯ ನಡೆಸುವುದು ವಿಶೇಷ. ಇಲ್ಲಿ ಜೈನರ ವಿಗ್ರಹಗಳೂ ಇವೆ. ಅವಶೇಷಗಳು ಈಗಲೂ ಸಿಗುತ್ತಿವೆ.

ರಾಮೇಶ್ವರ ಅಲ್ಲ, ರಾಮಲಿಂಗೇಶ್ವರ ದೇವಾಲಯ

‘ಪುರಾಣದಿಂದಲೂ ಈ ದೇವಾಲಯಕ್ಕೆ ರಾಮಲಿಂಗೇಶ್ವರ ದೇವಸ್ಥಾನ ಎಂದು ಕರೆಯುತ್ತಿದ್ದಾರೆ. ರಾಮೇಶ್ವರ ಎಂದರೆ ತಮಿಳುನಾಡಿನ ದೇವಸ್ಥಾನ ನೆನಪಿಗೆ ಬರುತ್ತದೆ. ಇಲ್ಲಿ ಶಿವಲಿಂಗ ಇದೆ. ಗಂಗರ ಕಾಲದಿಂದಲೂ ರಾಮಲಿಂಗೇಶ್ವರ ಎಂದೇ ಪ್ರಸಿದ್ಧಿ ಪಡೆದಿದೆ. ಪುರಾತತ್ವ ಇಲಾಖೆ ಈಗ ರಾಮೇಶ್ವರ ದೇವಾಲಯ ಎಂಬ ಫಲಕ ಹಾಕಿದೆ. ಆದ್ದರಿಂದ ಹಿಂದಿನ ಹೆಸರನ್ನೇ ಮುಂದುವರಿಸಬೇಕು ಎಂದು ಇಲಾಖೆಗೆ ಮನವಿ ನೀಡುತ್ತೇವೆ’ ಎಂದು ಗ್ರಾಮದ ಮುಖಂಡ ಪಟೇಲ್ ಶಾಂತಪ್ಪ ತಿಳಿಸಿದರು.

ರಾಮೇಶ್ವರ ದೇವಸ್ಥಾನ ಎಂದರೆ ಪ್ರವಾಸಿಗರಿಗೆ ಗಲಿಬಿಲಿಯಾಗುತ್ತದೆ. ಇಲ್ಲಿ ರಾಮೇಶ್ವರ ದೇವರಿಲ್ಲ. ಇರುವುದು ರಾಮಲಿಂಗೇಶ್ವರ ಎಂದು ಅವರಿಗೆ ತಿಳಿಸಲು ಒಬ್ಬರು ಗೈಡ್ ಬೇಕು ಎನ್ನುತ್ತಾರೆ ಅವರು.

ಮಾರ್ಗ: ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ಅಂತರವಿದೆ.ಪಟ್ಟಣದಿಂದ ಸೋಮವಾರಪೇಟೆ,ಹರದನಹಳ್ಳಿ–ಅಮಚವಾಡಿ–ಹೊನ್ನಹಳ್ಳಿ ಹುಂಡಿ ಗ್ರಾಮದ ಮಾರಮ್ಮನ ದೇವಸ್ಥಾನದ ಬಲಭಾಗಕ್ಕೆ ಸಾಗಿದರೆ ನರಸಮಂಗಲ ರಾಮಲಿಂಗೇಶ್ವರ ದೇವಾಲಯಕ್ಕೆ ತಲುಪಬಹುದು.

ಪ್ರವಾಸಿ ತಾಣ ಆಗಬೇಕು

ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಬೇಕು. ಉದ್ಯಾನ ನಿರ್ಮಿಸಬೇಕು. ವಸತಿ ಗೃಹ ಆಗಬೇಕು. ಪೂಜಾ ಕಾರ್ಯಕ್ರಮ ಸಿದ್ಧತೆಗೆ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು. ಸುತ್ತಲೂ ಸುಂದರ ವಾತಾವರಣ ನಿರ್ಮಾಣವಾಗುವ ಜೊತೆಗೆ ದೇವಾಲಯವನ್ನು ಅಭಿವೃದ್ಧಿ ಪಡಿಸಲು ಪುರಾತತ್ವ ಇಲಾಖೆ ಮುಂದಾಗಬೇಕಿದೆ ಎಂದು ಗ್ರಾಮದ ಪಟೇಲ್ ಶಾಂತಪ್ಪ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.