ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಿಜ್ಞಾನ ದಿನ: ಪರಿಸರವನ್ನೇ ಪ್ರಯೋಗಾಲಯ ಮಾಡಿಕೊಂಡ ಚಿಣ್ಣರು

ರಾಮನ್ ಎಫೆಕ್ಟ್‌ಗೆ 92 ವರ್ಷ
Last Updated 27 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಯಳಂದೂರು: ಈ ಶಾಲೆಯ ಮಕ್ಕಳು ಬಯಲಿಗೆ ಬಂದು ಆಕಾಶ ಬಾಣ ಹಾರಿಸುತ್ತಾರೆ. ನೌಕೆಯ ವೇಗಕ್ಕೆ ವಾಯುವಿನಒತ್ತಡದ ಸಹ ಸಂಬಂಧದ ಬಗ್ಗೆ ತರ್ಕಿಸುತ್ತಾರೆ. ಬಲೂನ್ ಮೇಲೇರಿದಂತೆ ವಿರುದ್ಧದಿಕ್ಕಿನಲ್ಲಿ ಗಾಳಿಯ ನೂಕು ಬಲದ ಮಹತ್ವವನ್ನು ಅಚ್ಚರಿಯಿಂದ ವೀಕ್ಷಿಸುತ್ತಾರೆ.

ಅಗ್ನಿಗೆ ತಾಕಿದರೂ ಒಡೆಯದ ಬಲೂನ್ ಹಿಂದಿರುವ ರಹಸ್ಯವನ್ನು ಪತ್ತೆಹಚ್ಚುತ್ತಾರೆ, ಇಂತಹ ಪುಟ್ಟ ಪುಟ್ಟ ಪ್ರಯೋಗಗಳ ಮೂಲಕವೇ ಈ ಸಾಲೆಯಲ್ಲಿ ವಿಜ್ಞಾನದಕಲಿಕೆ ಸಾಗುತ್ತದೆ. ಸ್ವಯಂ ಕಲಿಕೆಯ ಮೂಲಕ ವೈಜ್ಞಾನಿಕ ತತ್ವಗಳ ಹಿಂದಿನ ರಹಸ್ಯವನ್ನುದೃಢೀಕರಿಸುತ್ತಾರೆ ಆಲ್ಕೆರೆ ಅಗ್ರಹಾರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯಚಿಣ್ಣರು.

ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸಲು, ವೈಜ್ಞಾನಿಕವಿಷಯಗಳನ್ನು ಅನುಭವಕ್ಕೆ ತರುವ ನಿಟ್ಟಿನಲ್ಲಿ ನೂರಾರು ಪ್ರಯೋಗಗಳನ್ನು ನಡೆಸಲುಶಾಲೆಗಳಲ್ಲಿ ಅವಕಾಶ ಇದೆ. ವಿಜ್ಞಾನ, ಭೂಗೋಳ, ಜೀವ ಮತ್ತು ಪರಿಸರ ಪಠ್ಯಗಳನ್ನು ನೀಡಿ,ಪರೀಕ್ಷಿಸಲು ಉಪಕರಣಗಳನ್ನು ಒದಗಿಸಲಾಗಿದೆ. ಅತಿ ಸರಳವಾಗಿ ಕಲಿಯಲು ನೂರಾರು ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವೂ ಈಗ ಸಿದ್ಧಿಸಿದೆ. ಈ ನಿಟ್ಟಿನಲ್ಲಿಆಲ್ಕೆರೆ ಶಾಲೆಯಲ್ಲಿ ಪವಾಡ ರಹಸ್ಯ, ವಿಜ್ಞಾನ ನಾಟಕ ಮತ್ತು ಮಕ್ಕಳು ನಿಸರ್ಗದ ನಡುವೆಕಲಿಯಲು ಅವಕಾಶ ಕಲ್ಪಿಸಿದ್ದಾರೆ ಶಿಕ್ಷಕರು.

ವಿಜ್ಞಾನದ ಹಿಂದಿರುವ ತತ್ವಗಳ ಮರ್ಮವನ್ನ ಸರಳವಾಗಿ ಬೋಧಿಸಿದರೆ ಚಿಣ್ಣರುಲವಲವಿಕೆಯಿಂದ ಕಲಿಯುತ್ತಾರೆ. ಸೃಜನಾತ್ಮಕ ಚಟುವಟಿಕೆ ಮತ್ತು ಸುಲಭ ಪ್ರಯೋಗಗಳ ಮೂಲಕಮಕ್ಕಳು ವೈಜ್ಞಾನಿಕ ದೃಷ್ಟಿ ಬೆಳೆಸಿಕೊಳ್ಳಲು ಸಾಧ್ಯ. ಎಳೆಯರು ಆಡಾಡುತ್ತಲೇಕಲಿಯುವಂತಾದಾಗ ವಿಜ್ಞಾನದ ಆಸಕ್ತಿ ಮೊಳೆಯುತ್ತದೆ. ಕಡಿಮೆ ಖರ್ಚಿನ ಹಾಗೂ ದೈನಂದಿನಬಳಕೆಯ ಬಲೂನ್, ನಾಣ್ಯ, ಪ್ಲಾಸ್ಟಿಕ್ ಕವರ್, ಗಾಜು, ಎಲೆ ಮೊದಲಾದ ಸಾಮಗ್ರಿಗಳನ್ನುವಿದ್ಯಾರ್ಥಿಗಳಿಗೆ ನೀಡಿ ರಾಕೆಟ್ ತಂತ್ರಜ್ಞಾನ, ಆಕಾಶ ಬಾಣ, ಬಲದ ಚಲನೆಯ ನಿಯಮಗಳನ್ನುತಿಳಿಸಬಹುದು' ಎಂದು ಸರ್ಕಾರಿ ಉನ್ನತೀಕರಿಸಿದ ಶಾಲೆಯ ವಿಜ್ಞಾನ ಶಿಕ್ಷಕ ಎನ್.ದಿವಾಕರ್ ಹೇಳಿದರು.

ಎಲೆಗಳ ವೈವಿಧ್ಯ, ಹಸಿರಿನ ಮಹತ್ವ ಮತ್ತು ಸಸ್ಯಗಳ ವೈಜ್ಞಾನಿಕ ಹೆಸರು ಗುರುತಿಸುವವಿಧಾನವನ್ನು ಅರಿತರೆ ಅವುಗಳ ಸಂರಕ್ಷಣೆಯ ಅಗತ್ಯ ಮನವರಿಕೆ ಆಗುತ್ತದೆ. ಹೂಗಳ ಚಿತ್ರತೆಗೆದು ಗೂಗಲ್ ಇಮೇಜ್ ಸರ್ಚ್ ಮೂಲಕ ಮಾಹಿತಿ ಸಂಗ್ರಹಿಸಬಹುದು. ಇಂತಹ ಕಲಿಕೆಯನ್ನುಶಾಲಾ ಹೊರ ವಲಯದಲ್ಲೂ ಕಲಿಯಬಹುದು ಎನ್ನುತ್ತಾರೆ 8ನೇ ವರ್ಗದ ವಿದ್ಯಾರ್ಥಿನಿ ಎನ್.ಅಶ್ವಿನಿ, ಮಣಿ, ಮಹೇಶ.

ರಾಕೆಟ್ ತಂತ್ರಜ್ಞಾನ ಪರಿಚಯಿಸುವುದು ಸುಲಭ. ಗಾಳಿ ತುಂಬಿದ ಬಲೂನ್ ಹಿಂಭಾಗ ಸ್ಟ್ರಾಬಳಸಿ ಗಾಳಿ ನಿರ್ಧಿಷ್ಟ ವೇಗದಲ್ಲಿ ಹೊರಬರುವಾಗ ನೂಕು ಬಲ ಅದನ್ನು ಮುಮ್ಮುಖವಾಗಿಮೇಲೇರಿಸುತ್ತದೆ. ಇದಕ್ಕೆ ಹೆಚ್ಚು ವೆಚ್ಚ ಮಾಡಬೇಕಿಲ್ಲ. ಸಂತಸದ ಕಲಿಕೆಯೂ ಸಾಧ್ಯಎಂದು 7ನೇ ತರಗತಿಯ ಬಿ.ಪುಣ್ಯ ಮತ್ತು ಕೃಷ್ಣ ಖುಷಿಯಿಂದ ಹೇಳುತ್ತಾರೆ.

ವಿಜ್ಞಾನ ದಿನದ ವಿಶೇಷ
1928ರ ಫೆ. 28ರಂದು ಸರ್ ಚಂದ್ರಶೇಖರ್ ವೆಂಕಟರಾಮನ್ ಅವರ 'ರಾಮನ್ ಪರಿಣಾಮ' ಬೆಳಕಿನಚದುರುವಿಕೆಯ ನಿಯಮಗಳನ್ನು ಜಗತ್ತಿಗೆ ಪರಿಚಯಿಸಿತು. ಇವರ ಆವಿಷ್ಕರಿಸಿದ ಸಂಶೋಧನೆಗೆ1930ರಲ್ಲಿ ನೊಬೆಲ್ ಪುರಷ್ಕಾರ ದೊರೆಯಿತು. ಭಾರತದಲ್ಲಿ ಪ್ರತಿ ವರ್ಷ ಈ ದಿನದಂದು'ರಾಷ್ಟ್ರೀಯ ವಿಜ್ಞಾನ ದಿನ'ವಾಗಿ ಆಚರಿಸಲಾಗುತ್ತದೆ. 'ಭವಿಷ್ಯದಲ್ಲಿ ವಿಜ್ಞಾನ,ತಂತ್ರಜ್ಞಾನ ಮತ್ತು ಮಾಹಿತಿ ಸಂವಹನ: ಶಿಕ್ಷಣದಲ್ಲಿ ಬಳಕೆಯಾಗುವ ಕೌಶಲ ಮತ್ತುನೈಪುಣ್ಯತೆಗಳ ಮೇಲೆ ಇವುಗಳ ಪರಿಣಾಮ' ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ.

ಕೋವಿಡ್-19 ನಂತರ ಆನ್ಲೈನ್ ಕಲಿಕೆ: ಉಪಯೋಗ ಮತ್ತು ಅದರ ಮಿತಿ, ಸಾಮಾಜಿಕ ಮೌಲ್ಯ,ನೀತಿ ಮತ್ತು ತತ್ವಗಳ ಬಗ್ಗೆ ಹೈದರಾಬಾದ್ ಗಾಂಧಿ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಅಖಿಲ ಭಾರತ ಮಟ್ಟದಲ್ಲಿ ವೈಜ್ಞಾನಿಕ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT