ಮಂಗಳವಾರ, ಡಿಸೆಂಬರ್ 1, 2020
19 °C

ಚಾಮರಾಜನಗರ: 91ಕ್ಕೆ ಇಳಿದ ಸಕ್ರಿಯ ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿರುವ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 91ಕ್ಕೆ ಇಳಿದಿದೆ. ಬುಧವಾರ 10 ಹೊಸ ಪ್ರಕರಣಗಳು ದೃಢಪಟ್ಟಿದ್ದು, 20 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ.  

ಚಿಕಿತ್ಸೆ ಪಡೆಯುತ್ತಿರುವ 91 ಮಂದಿ ಸೋಂಕಿತರ ಪೈಕಿ 53 ಮಂದಿ ಮನೆಗಳಲ್ಲೇ ಇದ್ದಾರೆ. 11 ಮಂದಿ ಐಸಿಯುನಲ್ಲಿದ್ದಾರೆ. ಉಳಿದ 27 ಮಂದಿ ಕೋವಿಡ್‌ ಕೇರ್‌ ಆಸ್ಪತ್ರೆಗಳಲ್ಲಿದ್ದಾರೆ. 

ಬುಧವಾರ ಅಂಕಿ ಅಂಶಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಪ್ರಕರ‌ಣಗಳ ಸಂಖ್ಯೆ 6,204ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 5,986ಕ್ಕೆ ತಲುಪಿದೆ. ಈವರೆಗೆ 108 ಮಂದಿ ಕೋವಿಡ್‌ನಿಂದ ಹಾಗೂ ಬೇರೆ ಅನಾರೋಗ್ಯಗಳಿಂದಾಗಿ 19 ಮಂದಿ ಮೃತಪಟ್ಟಿದ್ದಾರೆ. 

ದಾಖಲೆಯ ಪರೀಕ್ಷೆ: ಬುಧವಾರ ದಾಖಲೆಯ 1,659 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,649 ಮಂದಿಯ ವರದಿಗಳು ನೆಗೆಟಿವ್‌ ಬಂದಿವೆ. 

ದೃಢಪಟ್ಟ 10 ಪ್ರಕರಣಗಳಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ತಲಾ ಮೂರು, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ತಲಾ ಎರಡು ಪ್ರಕರಣಗಳು ಸೇರಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು