ಎಣ್ಣೆ ಮಜ್ಜನ ಸೇವೆ ಪ್ರಯುಕ್ತ ಮುಂಜಾನೆಯಿಂದ ಅರ್ಚಕರು ಬಿಲ್ವಾರ್ಚನೆ, ಅಭೀಷೇಕ, ಮಂಗಳಾರತಿ ಬೆಳಗಿದರು. ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಹುಲಿವಾಹನ ಸೇವೆ, ಬಸವ ವಾಹನ, ರುದ್ರಾಕ್ಷಿ ಮಂಟಪ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ, ಪಂಜಿನ ಸೇವೆ, ಉರುಳು ಸೇವೆ, ಇನ್ನಿತರ ಸೇವೆಯಲ್ಲಿ ಪಾಲ್ಗೊಂಡು ಮಾದಪ್ಪನಿಗೆ ಹೊತ್ತಿದ್ದ ಹರಕೆ ಹಾಗೂ ಕಾಣಿಕೆ ಮುಡಿಗೇರಿಸಿದರು.