ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಸೆಸ್ಕ್‌ ಕಚೇರಿಗೆ ಮತ್ತಿಗೆ ಹಾಕಿದ ರೈತರು; ಗುಣಮಟ್ಟದ ವಿದ್ಯುತ್‌ ನೀಡಲು ಆಗ್ರಹ
Last Updated 7 ಜನವರಿ 2020, 15:24 IST
ಅಕ್ಷರ ಗಾತ್ರ

ಚಾಮರಾಜನಗರ: ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್‌ ಪೂರೈಸಬೇಕುಎಂದು ಆಗ್ರಹಿಸಿ ರೈತರು ಮಂಗಳವಾರ ನಗರದ ಸೆಸ್ಕ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದುಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸೆಸ್ಕ್‌ ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸೆಸ್ಕ್‌ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಬಳಿಕ ಪೊಲೀಸರು ತಡೆದರು. ನಂತರ ಎಲ್ಲ ರೈತರು ಸೆಸ್ಕ್‌ ಕಚೇರಿ ಮುಂಭಾಗ ಪ್ರತಿಭಟನೆಗೆ ಕುಳಿತರು.ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ನವಿಲೂರು, ಹಳ್ಳಿಕೆರೆಹುಂಡಿ, ಆಲ್ದೂರು, ಗಣಿಗನೂರು, ಜನ್ನೂರು, ಹೊಸೂರು, ಗೊದಲೆಹುಂಡಿ, ಬಿಎಂಕೆ ಹುಂಡಿ, ಭೋಗಯ್ಯನ ಹುಂಡಿ ಗ್ರಾಮಗಳ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೊರೈಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರ ಕಡಿಮೆ ಗುಣಮಟ್ಟದವೋಲ್ಟೇಜ್ಸರಬರಾಜಾಗುತ್ತಿದೆ. ಇದರಿಂದ ನೀರಿನ ಅಭಾವ ಉಂಟಾಗಿದ್ದು, ಜನ ಜಾನುವಾರುಗಳಿಗೆ ಹಾಗೂ ಕಬ್ಬು, ಬಾಳೆ, ತರಕಾರಿ, ತೋಟಗಾರಿಕೆ ಬೆಳೆಗಳಿಗೆ ನೀರಿನ ಸಮಸ್ಯೆಯಾಗಿದೆ. ಕೂಡಲೇ, ಈ ಭಾಗದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕುಒತ್ತಾಯಿಸಿದರು.

7 ಗಂಟೆ ವಿದ್ಯುತ್ ನೀಡಬೇಕು ಎಂದು ಸರ್ಕಾರ ಆದೇಶಹೊರಡಿಸಿದೆ. ಆದರೆ, ಅಧಿಕಾರಿಗಳು ಅನಿಯಮಿತ ವಿದ್ಯುತ್ ನೀಡುತ್ತಿದ್ದಾರೆ. ಇದರೊಂದಿಗೆಗುಣಮಟ್ಟದ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಎಂದು ಆರೋಪಿಸಿದರು.

ಈಗಾಗಲೇ ನೀಡುತ್ತಿರುವ ನಿರಂತರ ಜ್ಯೋತಿ ಮನರಂಜನೆಗೆ ಸೀಮಿತವಾಗಿದೆ.ಸರ್ಕಾರ ರೈತ ಯೋಜನೆಯನ್ನು ಜಾರಿಗೆ ತಂದು ಅನ್ನದಾತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡಬೇಕು. ಸೆಸ್ಕ್‌ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇವೆ ಎಂದು ಲಿಖಿತವಾಗಿ ಭರವಸೆ ನಿಡಬೇಕು ಎಂದು ಪಟ್ಟು ಹಿಡಿದರು.

ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡುತ್ತೇವೆ ಎಂದು ಭರವಸೆ ನೀಡಿದನಂತರ ರೈತರುಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತರಾದ ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಹಾಡ್ಯ ರವಿ, ಮಧು, ನಾಗರಾಜು, ನವಿಲೂರು ನಾಗಣ್ಣ, ಪಾಪಣ್ಣ, ನಾಗೇಶ್, ಚಿಕ್ಕಮಲ್ಲಪ್ಪ, ಸೋಮಣ್ಣ, ರಮೇಶ್ ಪಾಲ್ಗೊಂಡಿದ್ದರು.

ಸಮಸ್ಯೆ ಬಿಚ್ಚಿಟ್ಟ ರೈತರು

‘ನವಿಲೂರು ವ್ಯಾಪ್ತಿಯಲೈನ್‌ಮನ್‌ಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್‌ ಸಮಸ್ಯೆ ಹೇಳಿದರೆ ಮೇಲಧಿಕಾರಿಗಳಿಗೆ ಹೇಳಿ ಎಂಬ ಉಡಾಫೆಯ ಮಾತುಗಳನ್ನು ಹೇಳುತ್ತಾರೆ. ಕಳಪೆ ಗುಣಮಟ್ಟದ ವಿದ್ಯುತ್‌ ಪೂರೈಸಿದರೆ ಮೋಟಾರ್ ಹಾಳಾಗುತ್ತದೆ. ಫಸಲು ನೆಲಕಚ್ಚುತ್ತದೆ’ ಎಂದು ನೆರೆದಿದ್ದ ರೈತರು ಸಮಸ್ಯೆ ಬಿಚ್ಚಿಟ್ಟರು.

‘ಒಂದೆರಡು ದಿನ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಸಹಕರಿಸಿ ಎಂದರೆ ಮನುಷ್ಯರು ಸಹಕರಿಸುತ್ತಾರೆ. ಆದರೆ, ಬೆಳೆದ ಬೆಳೆಗಳು ಸಹಕರಿಸಲು ಸಾಧ್ಯವೇ? ಪ್ರತಿ ಬೆಳೆಗಳಿಗೂ ಸರಿಯಾದ ಸಮಯಕ್ಕೆ ನೀರು ಪೂರೈಸಲೇಬೇಕು. ನೀವು ಏನಾದರೂ ಮಾಡಿ ನಮಗೆ 400 ವ್ಯಾಟ್‌ ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT