ಚಾಮರಾಜನಗರ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಡಿ.21ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೊದಲ ದಿನ 21ರಂದು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಗ್ರಾಮಾಂತರ ಪ್ರದೇಶಗಳಲ್ಲಿ 22 ಹಾಗೂ 23ರಂದು ಮನೆಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಪಟ್ಟಣ ಪ್ರದೇಶದಲ್ಲಿ 22, 23 ಹಾಗೂ 24ರಂದು ಸಹ ಮನೆ ಮನೆಗೆ ಭೇಟಿನೀಡಿ ಲಸಿಕೆ ಹಾಕಲಾಗುವುದು.

ಪಟ್ಟಣ ಪ್ರದೇಶದಲ್ಲಿರುವ 41,715 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 2,08,596 ಮನೆಗಳಿಗೆ ಭೇಟಿ ನೀಡಲಾಗುವುದು. ಜಿಲ್ಲೆಯಲ್ಲಿ 61,161 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 20,480 ಮಕ್ಕಳಿಗೆ ನೀಡಲಾಗುತ್ತಿದ್ದು ಈ ಪೈಕಿ ನಗರ ಪ್ರದೇಶದದಲ್ಲಿ 6,801, ಗ್ರಾಮೀಣ ಪ್ರದೇಶದಲ್ಲಿ 13,679 ಮಕ್ಕಳಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 12,404 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ಈ ಪೈಕಿ ನಗರ ಪ್ರದೇಶದ 1,963, ಗ್ರಾಮೀಣ ಪ್ರದೇಶದದಲ್ಲಿ 10,441 ಮಕ್ಕಳಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ 10,401 ಮಕ್ಕಳಿಗೆ ಲಸಿಕೆ ನೀಡಲಿದ್ದು, ನಗರ ಪ್ರದೇಶದ 4,028, ಗ್ರಾಮೀಣ ಪ್ರದೇಶದಲ್ಲಿ 6,373 ಮಕ್ಕಳಿದ್ದಾರೆ. ಹನೂರು ತಾಲ್ಲೂಕಿನಲ್ಲಿ 12,241 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು ನಗರ ಪ್ರದೇಶದದಲ್ಲಿ 926, ಗ್ರಾಮೀಣ ಪ್ರದೇಶದಲ್ಲಿ 11,315 ಮಕ್ಕಳು ಇದ್ದಾರೆ. ಯಳಂದೂರು ತಾಲ್ಲೂಕಿನಲ್ಲಿ 5,635 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು ಈ ಪೈಕಿ ನಗರ ಪ್ರದೇಶದಲ್ಲಿ 511, ಗ್ರಾಮೀಣ ಪ್ರದೇಶದಲ್ಲಿರುವ 5,124 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ.

ಜಿಲ್ಲೆಯಲ್ಲಿ 612 ಪಲ್ಸ್ ಪೋಲಿಯೋ ಬೂತ್ಗಳನ್ನು ತೆರೆಯಲಾಗಿದ್ದು ನಗರ ಪ್ರದೇಶಗಳಲ್ಲಿ 93 ಬೂತ್, ಗ್ರಾಮೀಣ ಪ್ರದೇಶಗಳಲ್ಲಿ 519 ಬೂತ್ ತೆರೆಯಲಾಗುತ್ತಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 189, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 156, ಕೊಳ್ಳೇಗಾಲ ತಾಲ್ಲೂಕು 90, ಹನೂರು ತಾಲ್ಲೂಕು 133 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 44 ಬೂತ್ಗಳನ್ನು ತೆರೆಯಲಾಗಿದೆ.

ಕಾರ್ಯಕ್ರಮದ ಮೇಲ್ವಿಚಾರಣೆಗೆ ಜಿಲ್ಲೆಯಾದ್ಯಂತ 130 ಮೇಲ್ವಿಚಾರಕರು ಹಾಗೂ 2,528 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. 25 ಟ್ಯಾನ್ಸಿಟ್ ಹಾಗೂ 4 ಮೊಬೈಲ್ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದ್ದಾರೆ.

ಇಂದು ಜಾಗೃತಿ ಜಾಥಾ

ಪಲ್ಸ್ ಪೋಲಿಯೋ ಕಾರ್ಯಕ್ರಮ ಡಿ.21 ರಿಂದ 24 ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪೋಲಿಯೋ ಲಸಿಕೆಯ ಕುರಿತು ಅರಿವು ಮೂಡಿಸಲು ಡಿ.20ರಂದು ಬೆಳಿಗ್ಗೆ 8.30ಗಂಟೆಗೆ ಗುಂಡ್ಲುಪೇಟೆ ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರದ ಆವರಣದ ಬಳಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.