ಗುರುವಾರ , ಜೂನ್ 24, 2021
22 °C
ಪ್ರಜಾವಾಣಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ಫಲಾನುಭವಿಗಳ ನಿಟ್ಟುಸಿರು

ಮಹದೇಶ್ವರ ಬೆಟ್ಟ: ಉಚಿತ ಪಡಿತರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ:‌ ಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಎರಡು ತಿಂಗಳ ಪಡಿತರ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಫಲಾನುಭವಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

ಮಹದೇಶ್ವರ ಬೆಟ್ಟ, ಹಳೆಯೂರು, ಕಾಡೊಲ ಸೇರಿದಂತೆ ಇನ್ನಿತರ ಊರುಗಳಲ್ಲಿ ಪಡಿತರ ಸರಿಯಾಗಿ ವಿತರಣೆಯಾಗದಿರುವ ಬಗ್ಗೆ ‘ಪ್ರಜಾವಾಣಿ’ಯ ಶುಕ್ರವಾರ ಸಂಚಿಕೆಯಲ್ಲಿ ‘ಮಹದೇಶ್ವರ ಬೆಟ್ಟ: ಸಿಗುತ್ತಿಲ್ಲ ಉಚಿತ ಪಡಿತರ’ ಶೀರ್ಷಿಕೆಯ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ‌

ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಗಳು ದಿನಪೂರ್ತಿ ತೆರೆಯುವುದರ ಜೊತೆಗೆ ಸರ್ಕಾರ ಘೋಷಿಸಿರುವ ನಿಗದಿತ ಪಡಿತರವನ್ನು ಉಚಿತವಾಗಿ ವಿತರಿಸಲು ಕ್ರಮಕೈಗೊಂಡಿದ್ದಾರೆ.   

ಶನಿವಾರ ಬೆಳಿಗ್ಗೆ 7 ಗಂಟೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿದ್ದವು. ಗ್ರಾಹಕರು ಸರತಿ ಸಾಲಿನಲ್ಲಿ ನಿಂತುಕೊಂಡು ಪಡಿತರ ಪಡೆದರು. ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗಿದ್ದರೆ, ಇನ್ನೂ ಕೆಲವು ಕಡೆ ಆಗಿಲ್ಲ.

ಆಂಗನವಾಡಿಗಳಿಂದ ಮನೆ ಮನೆಗೆ ವಿತರಣೆ: ಬೆಟ್ಟದ ಸುತ್ತಮುತ್ತ ಅಂಗನವಾಡಿಗಳಿಂದ ಮಕ್ಕಳಿಗೆ ಪೂರೈಸಬೇಕಾದ ಪೌಷ್ಟಿಕ ಆಹಾರ ಮನೆಗೆ ತಲುಪುತ್ತಿರಲಿಲ್ಲ. ಪತ್ರಿಕೆಯ ವರದಿಯು ಈ ವಿಚಾರವನ್ನೂ ಪ್ರಸ್ತಾಪಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಇದಕ್ಕೂ ಸ್ಪಂದಿಸಿರುವ ಅಧಿಕಾರಿಗಳು, ಆಹಾರವನ್ನು ಮಕ್ಕಳ ಮನೆ ಮನೆಗೆ ತಲುಪಿಸಲು‌ ಕ್ರಮ ಕೈಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು