ಚಾಮರಾಜನಗರ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆ, ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗುಡುಗು ಮಿಂಚು ಸಹಿತ ಮಳೆಯಾಗಿದೆ.

ಜಿಲ್ಲಾಕೇಂದ್ರದಲ್ಲಿ ಸಂಜೆ 6.45ಕ್ಕೆ ಮಳೆ ಆರಂಭವಾಗಿ ಬಿರುಸು ಪಡೆಯಿತು. ಜೊತೆಗೆ ಮಿಂಚು, ಗುಡುಗಿನ ಸದ್ದು ರಾತ್ರಿ 9.30ರವರೆಗೂ ಮುಂದುವರೆಯಿತು. ಮಳೆಯಿಂದಾಗಿ ವಾತಾವರಣ ತಂಪಾಗಿದೆ.

ಯಳಂದೂರು ತಾಲ್ಲೂಕಿನ ಕಾಡಂಚಿನ ಪ್ರದೇಶದಲ್ಲಿ ರಾತ್ರಿ 8.30ರ ನಂತರ ಮಳೆ ಸುರಿದಿದೆ. ಅಲ್ಲೂ ಗುಡುಗು ಮಿಂಚು ಅಬ್ಬರ ಜೋರಾಗಿತ್ತು.

ಸಂತೇಮರಹಳ್ಳಿ ಭಾಗದಲ್ಲಿ ಅರ್ಧಗಂಟೆ ಕಾಲ ಮಳೆ ಸುರಿದಿದೆ. ಕೊಳ್ಳೇಗಾಲ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದ್ದರೆ, ಹನೂರು, ಗುಂಡ್ಲುಪೇಟೆ ತಾಲ್ಲೂಕಿನ ಬಹುಭಾಗದಲ್ಲಿ ಮಳೆಯಾಗಿಲ್ಲ.

ಶುಕ್ರವಾರ ಬೆಳಿಗ್ಗ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 0.84 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು 1.22 ಸೆಂ.ಮೀ, ಹನೂರು ತಾಲ್ಲೂಕಿನಲ್ಲಿ 1.01 ಸೆಂ.ಮೀ ಮಳೆಯಾಗಿದೆ.

ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.