ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಮರಹಳ್ಳಿ | ತಂಬಾಕು ಉತ್ಪನ್ನ ಮಾರಾಟ: ದಂಡ

Published 9 ಜುಲೈ 2024, 14:06 IST
Last Updated 9 ಜುಲೈ 2024, 14:06 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಅವರು ಮಂಗಳವಾರ ಅಂಗಡಿಗಳ ಮೇಲೆ ದಾಳಿ ನಡೆಸಿ 24 ಪ್ರಕರಣಗಳಲ್ಲಿ ₹ 1,520 ದಂಡ ವಿಧಿಸಿದ್ದಾರೆ.

ಗ್ರಾಮದಲ್ಲಿರುವ ಬೇಕರಿ, ಟೀ ಅಂಗಡಿ, ದಿನಸಿ ಅಂಗಡಿ, ಹೋಟೆಲ್ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಕೋಟ್ಪಾ ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡಬಾರದು. ಟೀ ಅಂಗಡಿ, ಬೇಕರಿ, ದಿನಸಿ ಅಂಗಡಿಗಳಲ್ಲಿ ತಂಬಾಕು ಸೇವನೆ ಮಾಡಬಾರದು ಎಂಬ ನಾಮಫಲಕ ಅಳವಡಿಸಿರಬೇಕು, ಟೀ ಅಂಗಡಿ, ಬೇಕರಿ ಸ್ಥಳಗಳಲ್ಲಿ ತಂಬಾಕು ಸೇವನೆಗೆ ಮಾಲೀಕರು ಅವಕಾಶ ಮಾಡಿಕೊಡಬಾರದು. ಟೀ ಅಂಗಡಿ, ಬೇಕರಿ ಮುಂಭಾಗದಲ್ಲಿ ಬೀಡಿ, ಸಿಗರೇಟ್ ತುಂಡುಗಳು ಕಂಡು ಬಂದರೆ ದಂಡ ವಿಧಿಸಲಾಗುವುದು. ಶಾಲಾ, ಕಾಲೇಜು ಇರುವ ಕಡೆಗಳಲ್ಲಿ 100 ಮೀಟರ್ ಅಂತರದ ಒಳಗೆ ತಂಬಾಕು ಮಾರಾಟ ಮಾಡಬಾರದು. ಚಿಕ್ಕಮಕ್ಕಳ ಕೈಯಲ್ಲಿ ತಂಬಾಕು ವಸ್ತುಗಳನ್ನು ನೀಡಬಾರದು’ ಎಂದು ತಿಳಿಸಿದರು.

ಜಿಲ್ಲಾ ಸಲಹೆಗಾರ ಪ್ರಶಾಂತ್, ಸಮಾಜ ಕಾರ್ಯಕರ್ತ ವೀರಣ್ಣ, ಶಿಕ್ಷಣ ಇಲಾಖೆ ಹಾಗೂ ಪೊಲೀಸರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT