ಮಂಗಳವಾರ, ನವೆಂಬರ್ 24, 2020
26 °C

ಮಧುಮಲೆ ಅರಣ್ಯದಲ್ಲಿ ಆನೆ ದಾಳಿ, ಸ್ಕೂಟರ್‌ ಸವಾರ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಮಸಿನಗುಡಿ– ತೆಪ್ಪಕಾಡು ರಸ್ತೆಯಲ್ಲಿ ಸಲಗವೊಂದು ದ್ವಿಚಕ್ರವಾಹನ ಸವಾರರೊಬ್ಬರ ಮೇಲೆ ಗುರುವಾರ ದಾಳಿ ಮಾಡಿದ್ದು, ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. 

ಗಂಡಾನೆಯು ದಾಳಿ ನಡೆಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಜೀಪೊಂದನ್ನು ಏರಿ ಸವಾರ ಪಾರಾಗಿದ್ದಾರೆ. ದಾಳಿ ನಡೆಸಿದ ನಂತರವೂ ಆನೆ ರಸ್ತೆ ಬದಿಯಲ್ಲೇ ನಿಂತಿತ್ತು. ಸವಾರರನ್ನು ರಕ್ಷಿಸಿದ ಜೀಪಿನಲ್ಲಿದ್ದವರು ಘಟನೆಯನ್ನು ಚಿತ್ರೀಕರಣ ಮಾಡಿದ್ದಾರೆ.  

ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟರ್‌ ಅನ್ನು ತೆಗೆಯುವುದಕ್ಕಾಗಿ, ಜೀಪಿನಲ್ಲಿ ಇದ್ದವರು ರಸ್ತೆಯಲ್ಲಿ ದೊಡ್ಡ ವಾಹನಗಳನ್ನು ತಡೆದು ಸ್ಕೂಟರ್‌ ಬಳಿ ನಿಲ್ಲಿಸುವಂತೆ ಮನವಿ ಮಾಡಿದರೂ ಕೆಲವರು ಸ್ಪಂದಿಸಲಿಲ್ಲ. ಅಂತಿಮವಾಗಿ ಬೊಲೆರೊದಲ್ಲಿ ಬಂದವರು, ರಸ್ತೆಯಲ್ಲಿದ್ದ ಸ್ಕೂಟರ್‌ ಅನ್ನು ಅಲ್ಲಿಂದ ತೆಗೆದರು.   

ಘಟನೆ ನಡೆದಿರುವುದನ್ನು ಸ್ಥಳೀಯ ವಲಯ ಅರಣ್ಯಅಧಿಕಾರಿ ದಯಾನಂದನ್‌ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

‘ಇಂತಹ ಘಟನೆಗಳು ರಾತ್ರಿ ಸಂಚಾರ ಮಾಡುವವರಿಗೆ ಹೆಚ್ಚು ಆಗುತ್ತದೆ. ರಸ್ತೆ ಬದಿಯಲ್ಲಿ ಆನೆ ಇನ್ನಿತರ ಕಾಡು ಪ್ರಾಣಿಗಳು ಇದ್ದಾಗ ದೂರದಲ್ಲಿಯೇ ವಾಹನಗಳನ್ನು ನಿಧಾನ ಮಾಡಬೇಕು. ಪ್ರಾಣಿಗಳು ರಸ್ತೆ ದಾಟುವ ಭರದಲ್ಲಿ ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ’ ಎಂದು ಅವರು ಹೇಳಿದ್ದಾರೆ.

ಘಟನೆಯ ವಿಡಿಯೊ ಯೂನೈಟೆಡ್‌ ಕನ್ಸರ್ವೇಶನ್‌ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿವೆ. ವಿಡಿಯೊವನ್ನು ಕೆಳಗಿನ ಲಿಂಕ್ ಬಳಸಿ ನೋಡಬಹುದು.

https://facebook.com/groups/195208298046043?view=permalink&id=6734697735...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು