ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73 ಹೊಸ ಪ್ರಕರಣ, ಸೋಂಕಿತರ ಸಂಖ್ಯೆ 1,091ಕ್ಕೆ

Last Updated 16 ಜೂನ್ 2021, 15:48 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 73 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 214 ಮಂದಿ ಗುಣಮುಖರಾಗಿದ್ದಾರೆ.

24 ಗಂಟೆಯ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ಕೋವಿಡ್‌ಯೇತರ ಕಾರಣದಿಂದ ನಿಧನರಾಗಿದ್ದಾರೆ ಎಂದು ಕೋವಿಡ್‌ ಆಸ್ಪತ್ರೆ ವರದಿ ಹೇಳಿದೆ.

ಪ್ರಕರಣಗಳು ಕಡಿಮೆಯಾಗಿ, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಗಣನೀಯ ಇಳಿಮುಖವಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 1,091 ಮಂದಿ ಸೋಂಕಿತರಿದ್ದಾರೆ.

34 ಮಂದಿ ಐಸಿಯುನಲ್ಲಿ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲೂ ಗಮನಾರ್ಹ ಇಳಿಕೆಯಾಗಿದೆ. ಮಂಗಳವಾರದವರೆಗೆ 48 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದರು. ಬುಧವಾರ ಈ ಸಂಖ್ಯೆ 34ಕ್ಕೆ ಇಳಿದಿದೆ. ಹೋಂ ಐಸೊಲೇಷನ್‌ನಲ್ಲಿ 43 ಮಂದಿ ಇದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯ ಪ್ರಕರಣಗಳ ಸಂಖ್ಯೆ 29,803ಕ್ಕೆ ಏರಿದೆ. 28,228 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟವರೂ ಸೇರಿದಂತೆ 523 ಮಂದಿ ಕೊನೆಯುಸಿರೆಳೆದಿದ್ದಾರೆ.

ಬುಧವಾರ 2,008 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,928 ಜನರ ವರದಿ ನೆಗೆಟಿವ್‌ ಆಗಿದೆ. 80 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಏಳು ಮಂದಿಯ ವಿವರ ಇನ್ನಷ್ಟೇ ಪತ್ತೆ ಹಚ್ಚಬೇಕಾಗಿರುವುದರಿಂದ ಜಿಲ್ಲಾಡಳಿತ 73 ಪ್ರರಕಣಗಳನ್ನು ಮಾತ್ರ ಉಲ್ಲೇಖಿಸಿದೆ.

73 ಮಂದಿ ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 30, ಗುಂಡ್ಲುಪೇಟೆಯ 18, ಕೊಳ್ಳೇಗಾಲದ 16, ಹನೂರು ತಾಲ್ಲೂಕಿನ ಎಂಟು ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ. ಯಳಂದೂರು ತಾಲ್ಲೂಕಿನಲ್ಲಿ ಒಂದು ಪ್ರಕರಣವೂ ದೃಢಪಟ್ಟಿಲ್ಲ.

ಆಸ್ಪತ್ರೆಗಳಲ್ಲಿದ್ದ 16 ಮಂದಿ, ಕೋವಿಡ್ ಕೇರ್‌ ಕೇಂದ್ರಗಳಲ್ಲಿದ್ದ 191 ಹಾಗೂ ಹೋಂ ಐಸೊಲೇಷನ್‌ಲ್ಲಿದ್ದ ಏಳು ಮಂದಿ ಸೇರಿದಂತೆ 214 ಮಂದಿ ಬುಧವಾರ ಗುಣಮುಖರಾಗಿದ್ದಾರೆ. ಈ ಪೈಕಿ ಚಾಮರಾಜನಗರ ತಾಲ್ಲೂಕಿನ 61, ಗುಂಡ್ಲುಪೇಟೆ ತಾಲ್ಲೂಕಿನ 65, ಕೊಳ್ಳೇಗಾಲದ 40, ಹನೂರಿನ 30, ಯಳಂದೂರು ತಾಲ್ಲೂಕಿನ 14 ಹಾಗೂ ಹೊರ ಜಿಲ್ಲೆಯ ನಾಲ್ವರು ಇದ್ದಾರೆ.

2.37 ಲಕ್ಷ ಮಂದಿಗೆ ಲಸಿಕೆ

ಜಿಲ್ಲೆಯಲ್ಲಿ ಈವರೆಗೆ (ಜೂನ್‌ 15) 2,37,479 ಮಂದಿಗೆ ಕೋವಿಡ್‌ ಲಸಿಕೆ ಹಾಕಲಾಗಿದೆ.

ಈ ಪೈಕಿ 1,98,213 ಜನರು ಮೊದಲ ಡೋಸ್‌ ಪಡೆದಿದ್ದು, 29,266 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

18ರಿಂದ 44 ವರ್ಷ ವಯಸ್ಸಿನವರು 31,063 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 45ರಿಂದ 59 ವರ್ಷ ವಯಸ್ಸಿನವರು 75,603 ಜನ ಮೊದಲ ಡೋಸ್‌ ಹಾಗೂ 12,413 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು 98,678 ಮಂದಿ ಲಸಿಕೆ ಹಾಕಿಸಿಕೊಂಡಿದ್ದು, 78,764 ಮಂದಿ ಮೊದಲ ಹಾಗೂ 19,914 ಮಂದಿ 2ನೇ ಡೋಸ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT