ಚಾಮರಾಜನಗರ: ‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಅವರೇ ನನಗೆ ಗಂಟು ಬಿದ್ದಿದ್ದರು. ಇದರಲ್ಲಿ ನನ್ನ ತಪ್ಪು ಏನೂ ಇರಲಿಲ್ಲ. ಹಾಗಿದ್ದರೂ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಚಾಮರಾಜನಗರ ಸಮೀಪದ ಯಡಬೆಟ್ಟದಲ್ಲಿ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಹಾಗೂ ನಳಂದ ಬೌದ್ಧ ವಿಶ್ವವಿದ್ಯಾಲಯಕ್ಕೆ ಶನಿವಾರ ಭೂಮಿಪೂಜೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಧರ್ಮದ ವಿಚಾರದ ಬಗ್ಗೆ ಮಾತನಾಡುವಾಗ ನಾನು ಎಚ್ಚರಿಕೆಯಿಂದ ಇರುತ್ತೇನೆ. ಏನಾದರೂ ಹೇಳಿದರೆ ಅದು ವಿವಾದ ಆಗುತ್ತದೆ’ ಎಂದರು.

‘ವೀರಶೈವ– ಲಿಂಗಾಯತರಲ್ಲಿ ಗುರುಪರಂಪರೆ ಮತ್ತು ವಿರಕ್ತ ಪರಂಪರೆ ಎಂಬ ಎರಡು ವಿಧ ಇದೆ. ಒಂದು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದಾಗ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸುವಂತೆ ಅದೇ ಸಮುದಾಯದವರು ಮನವಿ ಮಾಡಿದರು. ಅದರಂತೆ ಸಮಿತಿ ರಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಯಿತು‘ ಎಂದು ಹೇಳಿದರು.

ನಳಂದ ಜ್ಞಾನ, ಅಧ್ಯಯನ ಕೇಂದ್ರ ಮತ್ತು ಬೌದ್ಧ ವಿ.ವಿ
ಚಾಮರಾಜನಗರದ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣ ಆಗಲಿರುವ ನಳಂದ ಬೌದ್ಧ ವಿಶ್ವವಿದ್ಯಾಲಯ, ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 25 ಎಕರೆ ಭೂಮಿ ಮಂಜೂರು ಮಾಡುವುದರ ಜೊತೆಗೆ ₹ 10 ಕೋಟಿ ಧನಸಹಾಯವನ್ನೂ ಬಿಡುಗಡೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.