ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಕ್‌ ಬೂತ್‌: ಲಸಿಕೆ ಪಡೆದ 683 ಮಹಿಳೆಯರು

Last Updated 14 ಜೂನ್ 2021, 17:04 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಿಳೆಯರಿಗೆ ಮಾತ್ರ ಕೋವಿಡ್‌ ಲಸಿಕೆ ನೀಡಲುಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ತೆರೆಯಲಾಗಿದ್ದಪಿಂಕ್‌ ಬೂತ್‌ಗಳಲ್ಲಿ 683 ಮಹಿಳೆಯರು ಲಸಿಕೆ ಪಡೆದಿದ್ದಾರೆ.

18 ವರ್ಷ ಮೇಲ್ಪಟ್ಟವರು ಹಾಗೂ 45 ಮೇಲ್ಪಟ್ಟ ಮಹಿಳೆಯರಿಗೆ ಲಸಿಕೆ ನೀಡುವುದಕ್ಕಾಗಿಚಾಮರಾಜನಗರದ ಜಿಲ್ಲಾ ಆಸ್ಪತ್ರೆ, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕು ಆಸ್ಪತ್ರೆಯ ಲಸಿಕಾ ಕೇಂದ್ರ, ಕೊಳ್ಳೇಗಾಲದ ವಾಸವಿ ಮಹಲ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಪಿಂಕ್‌ ಬೂತ್ ತೆರೆಯಲಾಗಿತ್ತು.

ಚಾಮರಾಜನಗರದಲ್ಲಿ 361, ಗುಂಡ್ಲುಪೇಟೆಯಲ್ಲಿ 187, ಕೊಳ್ಳೇಗಾಲದಲ್ಲಿ 82 ಮತ್ತು ಯಳಂದೂರಿನಲ್ಲಿ 53 ಮಂದಿ ಸ್ತ್ರೀಯರು ಲಸಿಕೆ ಪಡೆದಿದ್ದಾರೆ.

ಜಾಗೃತಿ: ನಗರದಲ್ಲಿ ತೆರೆಯಲಾಗಿರುವ ಪಿಂಕ್‌ ಬೂತ್‌ಗಳ ಬಗ್ಗೆ ನಗರಸಭೆಯ ಅಧಿಕಾರಿಗಳು ಜಾಗೃತಿ ಮೂಡಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಧ್ವನಿವರ್ಧಕದ ಮೂಲಕ ಪಿಂಕ್‌ ಬೂತ್‌ಗಳಲ್ಲಿ ಮಹಿಳೆಯರು ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.

ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ತೆರೆದಿರುವ ಪಿಂಕ್ ಬೂತ್‌ನಲ್ಲಿ ಮಹಿಳೆಯರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್, ನಗರಸಭೆ ಆಯುಕ್ತ ಕರಿಬಸವಯ್ಯ, ಪರಿಸರ ಇಂಜಿನಿಯರ್ ಗಿರಿಜಾ, ನಗರಸಭೆ ಆರೋಗ್ಯ ನಿರೀಕ್ಷಕರಾದ ಶರವಣ, ಶಿವಪ್ರಸಾದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT