ಗುಂಡ್ಲುಪೇಟೆ: 2018-19ನೇ ಸಾಲಿನ ಎಸ್ಸೆಸ್ಸೆಲ್ಸಿಪರೀಕ್ಷೆ ಫಲಿತಾಂಶದಲ್ಲಿ ಗುಂಡ್ಲುಪೇಟೆ ವಲಯ ಈ ಬಾರಿಯೂ ಜಿಲ್ಲೆಯಲ್ಲಿ ಕೊನೆಯ ಸ್ಥಾನ ಗಳಿಸಿದೆ. ರಾಜ್ಯ ಮಟ್ಟದಲ್ಲಿ 188ನೇ ಸ್ಥಾನ ಪಡೆದುಕೊಂಡು ಕಳಪೆ ಸಾಧನೆ ಮಾಡಿದೆ.

ವಲಯದಲ್ಲಿರುವ ಅನುದಾನಿತ ಶಾಲೆಗಳು ಪರೀಕ್ಷೆಯಲ್ಲಿ ಕಳಪೆ ಸಾಧನೆ ತೋರಿದ್ದು, ಇಡೀ ವಲಯದ ಫಲಿತಾಂಶದ ಮೇಲೆ ಪರಿಣಾಮ ಬಿದ್ದಿದೆ.ಸರ್ಕಾರಿ ಶಾಲೆಗಳು ಶೇ 70.3, ಖಾಸಗಿ ಶಾಲೆಗಳು 85.5 ಮತ್ತು ಅನುದಾನಿತ ಶಾಲೆಗಳು ಶೇ 56.4ರಷ್ಟು ಫಲಿತಾಂಶ ದಾಖಲಿಸಿವೆ.

ಜಿಲ್ಲೆಯಲ್ಲಿಗುಂಡ್ಲುಪೇಟೆ ವಲಯ ಶೇ 62.36ರಷ್ಟು ಫಲಿತಾಂಶ ದಾಖಲಿಸಿದೆ. ಒಂದು ವೇಳೆ ಇನ್ನೂ ಉತ್ತಮ ಫಲಿತಾಂಶ ಬಂದಿದ್ದರೆ, ಜಿಲ್ಲೆಯ ಒಟ್ಟಾರೆ ಫಲಿತಾಂಶ ಹೆಚ್ಚಿ, ರಾಜ್ಯದಲ್ಲಿ ಮತ್ತಷ್ಟು ಮೇಲಿನ ಸ್ಥಾನ ಗಳಿಸುತ್ತಿತ್ತು.

ತಾಲ್ಲೂಕಿನಲ್ಲಿ 20 ಸರ್ಕಾರಿ, 14 ಅನುದಾನಿತ, ಮತ್ತು 13 ಖಾಸಗಿ ಶಾಲೆಗಳಿವೆ. ಈ ವರ್ಷ 2,556 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1,594 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎರಡು ಶಾಲೆಗಳು (ಪಟ್ಟಣದ ನಿರ್ಮಲ ಕಾನ್ವೆಂಟ್ ಮತ್ತು ಮೋರಾರ್ಜಿ ದೇಸಾಯಿ ವಸತಿ ಶಾಲೆ (ವೀರನಪುರ ಕ್ರಾಸ್)) ಮಾತ್ರ ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಿವೆ.

20 ಸರ್ಕಾರಿ ಶಾಲೆಗಳ ಪೈಕಿ ಎರಡು ಶಾಲೆಗಳನ್ನು (ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು) ಬಿಟ್ಟು ಉಳಿದೆಲ್ಲ ಸರ್ಕಾರಿ ಶಾಲೆಗಳು ಶೇ 60ಕ್ಕೂ ಹೆಚ್ಚಿನ ಫಲಿತಾಂಶ ದಾಖಲಿಸಿವೆ. ಮೇಲುಕಾಮನಹಳ್ಳಿ ಗ್ರಾಮದಲ್ಲಿರುವ ಪರಿಶಿಷ್ಟ ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಂತು ಕಳೆದ ವರ್ಷ ಶೇ 38ರಷ್ಟಿದ್ದ ಫಲಿತಾಂಶವನ್ನು ಈ ಸಲ ಶೇ 82.97ಕ್ಕೆ ಹೆಚ್ಚಿಸಿಕೊಂಡಿದೆ.

‘ಗುಣಾತ್ಮಕ ಫಲಿತಾಂಶದಲ್ಲಿ ತಾಲ್ಲೂಕು ಪ್ರಥಮ, ಪರಿಮಾಣಾತ್ಮಕ (ಕ್ವಾಂಟಿಟಿ) ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ಬಂದಿದ್ದರೆ, ಒಟ್ಟಾರೆ ಫಲಿತಾಂಶ ಹೆಚ್ಚುತ್ತುತ್ತಿ. ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಆಡಳಿತ ಮಂಡಳಿಗಳು ಕಾರ್ಯನಿರ್ವಹಿಸಬೇಕಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

‘ಅನುದಾನಿತ ಶಾಲೆಗಳಿಂದಾಗಿ ಫಲಿತಾಂಶ ಕುಸಿತ’
ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಲತಿ ಸೋಮಶೇಖರ್ ಅವರು, ‘ಅನುದಾನಿತ ಶಾಲೆಗಳ ಆಡಳಿತ ಮಂಡಳಿಯವರು ಸರಿಯಾಗಿ ನಿರ್ವಹಣೆ ಮಾಡದೆ ಇದ್ದುದರಿಂದ ಉತ್ತಮ ಫಲಿತಾಂಶ ಬಂದಿಲ್ಲ’ ಎಂದು ಹೇಳಿದರು.

‘ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಪರಿಶ್ರಮ ಹಾಕಿ ಉತ್ತಮ ಫಲಿತಾಂಶ ಪಡೆದಿವೆ. ಆದರೆ ಅನುದಾನಿತ ಶಾಲೆಗಳಿಂದಾಗಿ ವಲಯದ ಫಲಿತಾಂಶ ಇಳಿಮುಖವಾಗುತ್ತಿದೆ. ಸರ್ಕಾರದಿಂದ ಅನುದಾನ ಪಡೆದುಕೊಳ್ಳುತ್ತಿರುವ ಈ ಶಾಲೆಗಳು, ಅನುದಾನಿತ ಶಾಲೆಗಳ ವ್ಯಾಪ್ತಿಗೆ ಬರುವುದಕ್ಕೂ ಮೊದಲು ಶೇ 100 ರಷ್ಟು ಫಲಿತಾಂಶ ದಾಖಲಿಸಿರುವ ನಿದರ್ಶನಗಳಿವೆ’ ಎಂದು ಅವರು ಹೇಳಿದರು.

ಅಂಕಿ ಅಂಶ
85.5%:ಖಾಸಗಿ ಶಾಲೆಗಳ ಫಲಿತಾಂಶ
70.3%:ಸರ್ಕಾರಿ ಶಾಲೆಗಳಲ್ಲಿ ದಾಖಲಾದ ಫಲಿತಾಂಶ
56.4%:ಅನುದಾನಿತ ಶಾಲೆಗಳ ಫಲಿತಾಂಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.