ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಬಸ್ ಜೊತೆ ಓಡಿ ಆತಂಕ ಸೃಷ್ಟಿಸಿದ ಆನೆ!

Published 14 ಜೂನ್ 2024, 7:40 IST
Last Updated 14 ಜೂನ್ 2024, 7:40 IST
ಅಕ್ಷರ ಗಾತ್ರ

ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಗುರುವಾರ ಮುಂಜಾನೆ ಗಂಡಾನೆಯು ಬಸ್ ಜೊತೆ ಓಡಿ ಆತಂಕ ಸೃಷ್ಟಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿತ್ತು.

ಕೆಎಸ್‌‌‌‌‌ಆರ್‌‌‌‌ಟಿಸಿ ಬಸ್ ಬೆಟ್ಟಕ್ಕೆ ತೆರಳುವಾಗ ಅಡ್ಡ ದಾರಿಯಲ್ಲಿ ಬಂದ ಆನೆ ಕಿರುಚಾಡಿ ರಂಪ ಮಾಡಿ, ಬಸ್ ಜೊತೆ ಸಮಾನಾಂತರವಾಗಿ ಓಡಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಸ್ಥಳೀಯರು ಆನೆ ಬರುತ್ತಿರುವ ಬಗ್ಗೆ ಎಚ್ಚರಿಸಿ ಸುತ್ತಮುತ್ತಲ ನಿವಾಸಿಗಳನ್ನು ಅಪಾಯದಿಂದ ಪಾರು ಮಾಡಿದರು.

‘ಜನರ ಕೂಗಾಟ ಮತ್ತು ಬಸ್ ಶಬ್ದಕ್ಕೆ ಬೆಚ್ಚಿದ ಆನೆಯು ನಂತರ ವಾಪಸ್ ಕಾಡಿನತ್ತ ತೆರಳಿತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT