ಬುಧವಾರ, ಜೂನ್ 16, 2021
27 °C

14 ರೋಗಿಗಳ ಸಾವಿಗೆ ಆಮ್ಲಜನಕದ ಕೊರತೆ ಕಾರಣ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ 14 ಮಂದಿ ಮೃತಪಟ್ಟಿದ್ದಾರೆ.

ಇವರ ಸಾವಿಗೆ ಆಮ್ಲಜನಕದ ಕೊರತೆ ಕಾರಣ ಅಲ್ಲ ಎಂದು ಆಮ್ಲಜನಕ ಸರಬರಾಜು ವಿಭಾಗದ ನೋಡೆಲ್‌ ಅಧಿಕಾರಿ ಡಿಸಿಎಫ್ ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮುಂದಿನ 12 ಗಂಟೆಯವರೆಗೆ ಆಮ್ಲಜನಕದ ಸಂಗ್ರಹ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ನಿತ್ಯ ನಮಗೆ 4.5 ಕೆ.ಎಲ್‌ ಆಮ್ಲಜನಕ ಬೇಕಿದೆ. 400 ಆಮ್ಲಜನಕದ ಸಿಲಿಂಡರ್‌ಗಳೂ ಇವೆ. ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೂ ಈಗ ಇರುವ ಆಮ್ಲಜನಕ ಸಾಕಾಗುತ್ತದೆ. ಭಾನುವಾರ ರಾತ್ರಿಯೇ ಆಮ್ಲಜನಕ ಸರಬರಾಜಾಗುತ್ತದೆ. ಸದ್ಯಕ್ಕೆ ಚಾಮರಾಜನಗರಕ್ಕೆ ಆಮ್ಲಜನಕದ ಕೊರತೆ ಇಲ್ಲ’ ಎಂದು ಹೇಳಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು