ಶನಿವಾರ, ಡಿಸೆಂಬರ್ 4, 2021
20 °C
ಮೃತ‍‍ಪ‍ಟ್ಟ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆ, ಒಟ್ಟು ಪ್ರಕರಣಗಳು 2,619

ಮೂರು ಸಾವು, ಒಂದೇ ದಿನ 1,225 ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಶನಿವಾರ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟ ಸೋಂಕಿತರ ಸಂಖ್ಯೆ 53ಕ್ಕೆ ಏರಿದೆ. ಕೋವಿಡ್‌ನಿಂದಾಗಿಯೇ 35 ಜನರು ಪ್ರಾಣಕಳೆದುಕೊಂಡಿದ್ದಾರೆ. ಬೇರೆ ಕಾರಣಗಳಿಂದ 18 ಜನರು ಕೊನೆಯುಸಿರೆಳೆದಿದ್ದಾರೆ. 

ಶನಿವಾರ 38 ಹೊಸ ಪ್ರಕರಣಗಳು ದೃಢಪಟ್ಟಿವೆ. 27 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ವರದಿಯಾಗಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ 2,619ಕ್ಕೆ ಏರಿದೆ. ಸೋಂಕು ಮುಕ್ತರಾದವರ ಸ‌ಂಖ್ಯೆ 2048ಕ್ಕೆ ತಲುಪಿದೆ. 518 ಸಕ್ರಿಯ ಪ್ರಕರಣಗಳು ಇವೆ. ಈ ಪೈಕಿ 149 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 12 ಮಂದಿ ಐಸಿಯುನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. 

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದ 70 ವರ್ಷದ ವಯಸ್ಸಿನ ವೃದ್ಧ (ರೋಗಿ ಸಂಖ್ಯೆ–3,62,231) ಸೆಪ್ಟೆಂಬರ್‌‌ 1ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಸಂಜೆ 4 ಗಂಟೆಗೆ ಮೃತಪಟ್ಟಿದ್ದಾರೆ. 

ಚಾಮರಾಜನಗರ ತಾಲ್ಲೂಕಿನ ಮೂಡ್ಲುಪುರ 60 ವರ್ಷದ ವ್ಯಕ್ತಿ (ರೋಗಿ ಸಂಖ್ಯೆ–3,28,561) ಆಗಸ್ಟ್ 27ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಬೆಳಿಗ್ಗೆ 8 ಗಂಟೆಗೆ ಮೃತಪಟ್ಟಿದ್ದಾರೆ. 

ಕೊಳ್ಳೇಗಾಲ ತಾಲ್ಲೂಕಿನ ಹೊಸೂರಿನ 70 ವರ್ಷದ ವೃದ್ಧ (ರೋಗಿ ಸಂಖ್ಯೆ 3,02,489) ಜುಲೈ 25ರಂದು ದಾಖಲಾಗಿಸಲಾಗಿತ್ತು. ಶನಿವಾರ ಬೆಳಿಗ್ಗೆ 8.30ಕ್ಕೆ ನಿಧನರಾಗಿದ್ದಾರೆ. 

ಪರೀಕ್ಷೆಯಲ್ಲಿ ದಾಖಲೆ: ಶನಿವಾರ ಒಂದೇ ದಿನ 1,225 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಒಂದೇ ದಿನ ಇಷ್ಟು ಪ್ರಮಾಣದ ಪರೀಕ್ಷೆ ನಡೆಸಿರುವುದು ಇದೇ ಮೊದಲು. ಆರ್‌ಟಿಪಿಸಿಆರ್‌ ವಿಧಾನದಲ್ಲಿ 310, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 898, ಟ್ರು ನಾಟ್‌ ವಿಧಾನದಲ್ಲಿ 17 ಪರೀಕ್ಷೆಗಳನ್ನು ನಡೆಸಲಾಗಿದೆ. 1188 ವರದಿಗಳು ನೆಗೆಟಿವ್‌ ಬಂದಿದೆ. 37 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ. 

ದೃಢ ಪಟ್ಟ 38 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 20, ಕೊಳ್ಳೇಗಾಲ ತಾಲ್ಲೂಕಿನ 11, ಗುಂಡ್ಲುಪೇಟೆ ತಾಲ್ಲೂಕಿನ ಏಳು ಪ್ರಕರಣಗಳು ಸೇರಿವೆ. ಗುಣಮುಖರಾದ 27 ಮಂದಿಯಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ತಲಾ 11 ಮಂದಿ, ಕೊಳ್ಳೇಗಾಲ ತಾಲ್ಲೂಕಿನ ನಾಲ್ವರು ಮತ್ತು ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು