ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಹುಲಿ ಗಣತಿ ಪ್ರಕ್ರಿಯೆ ನಡೆಯುತ್ತಿದ್ದು ಈಗಾಗಲೇ ಕ್ಯಾಮೆರಾ ಟ್ರಾಪ್ ಮುಗಿದಿದೆ. ಲೈನ್ ಟ್ರಾನ್ಸಾಕ್ಟ್ ನಡೆಯಬೇಕಿದೆ ಎಂದು ಬಿಆರ್‌ಟಿ ಡಿಸಿಎಫ್ ಬಿ.ಎಸ್.ಶ್ರೀಪತಿ ತಿಳಿಸಿದ್ದಾರೆ. ಮಲೆ ಮಹದೇಶ್ವರ ವನ್ಯಧಾಮದಲ್ಲೂ ಸೋಮವಾರದಿಂದ ಹುಲಿ ಗಣತಿ ಆರಂಭವಾಗಿದ್ದು 7 ವಲಯಗಳ 56 ಗಸ್ತುಗಳಲ್ಲಿ 168 ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಮೂರು ಹಂತಗಳಲ್ಲಿ ನಡೆಯುವ ಗಣತಿಯು ಮಾರ್ಚ್ 26ರವರೆಗೆ ನಡೆಯಲಿದೆ ಎಂದು ಎಂಎಂ ಹಿಲ್ಸ್ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.