ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಮೊಳೆಯೂರು ವಲಯದಲ್ಲಿ ಹುಲಿ ಮೃತದೇಹ ಪತ್ತೆ– ಕಾದಾಟದಿಂದ ಸತ್ತಿರುವ ಶಂಕೆ

ಕಾದಾಟದಿಂದ ಮೃತಪಟ್ಟಿರುವ ಶಂಕೆ
Published 9 ಫೆಬ್ರುವರಿ 2024, 1:48 IST
Last Updated 9 ಫೆಬ್ರುವರಿ 2024, 1:48 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ-ವಿಭಾಗ ಮೊಳೆಯೂರು ವಲಯದಲ್ಲಿ ಗುರುವಾರ ಹುಲಿಯೊಂದರ ಮೃತದೇಹ ಪತ್ತೆಯಾಗಿದೆ.

ಮೊಳೆಯೂರು ಶಾಖೆಯ ನಡಾಡಿ ಗಸ್ತಿನಲ್ಲಿ ಸಿಬ್ಬಂದಿಗೆ ಕಳೇಬರ ಕಂಡು ಬಂದಿದ್ದು, ಹುಲಿಗೆ 1ರಿಂದ 2 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯು ಗಂಡು ಅಥವಾ ಹೆಣ್ಣು ಎಂಬುದು ಗೊತ್ತಾಗಿಲ್ಲ.

ಪಶುವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.

ಮತ್ತೊಂದು ಹುಲಿಯ ಜೊತೆ ನಡೆದ ಕಾದಾಟದಲ್ಲಿ ಕತ್ತು ಮುರಿದಿರುವುದರಿಂದ ಅದು ಸತ್ತಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಕಾಡುನಾಯಿಗಳು ಸೇರಿದಂತೆ ಇತರೆ ಜೀವಿಗಳು ತಿಂದಿರುವುದರಿಂದ ಲಿಂಗ ಪತ್ತೆಯೂ ಸಾಧ್ಯವಾಗಿಲ್ಲ.

ಹುಲಿ ಯೋಜನೆಯ ಎಪಿಸಿಸಿಎಫ್‌, ಆನೆ ಯೋಜನೆ ಎಪಿಸಿಸಿಎಫ್‌, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್ ಸೇರಿದಂತೆ ಅಧಿಕಾರಿಗಳು, ಇಲಾಖಾ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT