ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದ ಚೈನ್ ಗೇಟ್ ಬಳಿ ಸೋಮವಾರ ಮಿನಿ ಬಸ್ (ಟಿಟಿ) ಪಲ್ಟಿಯಾಗಿ, ಪ್ರವಾಸಕ್ಕೆ ತೆರಳಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಪ್ರವಾಸಿಗರು ತುಮಕೂರು ಪಟ್ಟಣದ ಸಿದ್ಧಗಂಗಾ ಬಡವಾಣೆ ನಿವಾಸಿಗಳಾಗಿದ್ದು, ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ಸು ಬರುವಾಗ ಟಿಟಿ ವಾಹನ ಉರುಳಿ ಬಿದ್ದಿದೆ. ಒಟ್ಟು 18 ಜನರು ವಾಹನದಲ್ಲಿ ಪ್ರಯಾಣಿಸುವಾಗ ಚೈನ್ ಗೇಟ್ ಬಳಿಯ ಇಳಿಜಾರಿನಲ್ಲಿ ರಸ್ತೆ ಬದಿಗೆ ಸಿಲುಕಿ ಬಿದ್ದಿದೆ. ಚಾಲಕ ಟಿಟಿ ವೇಗ ತಗ್ಗಿಸಿದ್ದರಿಂದ ದೊಡ್ಡ
ಅನಾಹುತ ತಪ್ಪಿದೆ.

ಪ್ರವಾಸಿಗರಾದ ಲಕ್ಷ್ಮಿದೇವಮ್ಮ, ಶಶಿಕಲಾ, ಭವ್ಯ, ಸುಮಾ, ಚಂದನಾ, ಶೃತಿ, ಸುಪ್ರಿಯಾ, ಪ್ರಿಯಾಂಕ, ಸಹನ, ಶ್ವೇತಾ, ಸಂಧ್ಯಾ, ಸುಮತಿ, ಸುಬ್ರಮಣ್ಯ ಹಾಗೂ ಚಾಲಕ ಗಣೇಶ್ ಅವರ ತಲೆ, ಕೈ ಕಾಲು, ಭುಜಗಳಿಗೆ ಗಾಯವಾಗಿದೆ. ಇವರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 9 ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಅಪಘಾತದ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.